ವಿಟ್ಲ: ಜೋಗಿ ಮಠದ ಜೀರ್ಣೋದ್ಧಾರ ಬಗ್ಗೆ ಕೇಪು ಗ್ರಾಮದ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ಕೇಪು ವಲಯದ ಜೋಗಿ ಸಮಾಜದ ಎರಡನೇ ಗ್ರಾಮಸಭೆ ಜೋಗಿ ಮಠದ ಶ್ರೀ ಶ್ರದ್ಧಾನಾಥ್ ಮಹಾರಾಜ್ ಉಪಸ್ಥಿತಿಯಲ್ಲಿ ನಡೆಯಿತು.
ಕೇಪು ಗ್ರಾಮದ ಗುರಿಕಾರ ಸುರೇಶ್ ಕೇಪು, ಕೇಪು ಗ್ರಾಮದ ಜೋಗಿ ಸಮಾಜ ಅಧ್ಯಕ್ಷ ನಾರಾಯಣ ಪುರುಷ, ಗೋಕರ್ಣನಾಥ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ನಾಗರಾಜ್ ಕೆ.ಪಿ., ಸ್ಯಾಕ್ಸೋಫೋನ್ ಕಲಾವಿದ ಪಿ.ಕೆ.ದಾಮೋದರ ಪಡಿಬಾಗಿಲು, ಜೋಗಿ ಸಮಾಜದ ಹಿರಿಯರಾದ ಯಶವಂತ್ ವಿಟ್ಲ, ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಕನ್ಯಾನ, ಪ್ರಧಾನ ಕಾರ್ಯದರ್ಶಿ ನವೀನ್ ವಿಟ್ಲ, ಖಜಾಂಚಿ ಕೃಷ್ಣರಾಜ್ ಕೇಪು, ಮುಡಿಪು ವಲಯ ಜೋಗಿ ಸಮಾಜದ ಅಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.
*ಗ್ರಾಮ ಸಮಿತಿ ರಚನೆ: ಗ್ರಾಮ ಸಮಿತಿ ರಚಿಸಲಾಯಿತು. ಅಧ್ಯಕ್ಷ-ನಾರಾಯಣ ಜೋಗಿ ಕೇಪು, ಪ್ರಧಾನ ಕಾರ್ಯದರ್ಶಿ-ಕೃಷ್ಣರಾಜ್ ಕೇಪು, ಉಪಾಧ್ಯಕ್ಷ-ನಾಗರಾಜ್ ಕೆ.ಪಿ., ಕೋಶಾಧಿಕಾರಿ-ದಾಮೋದರ್ ಪಡಿಬಾಗಿಲು, ಜತೆ ಕಾರ್ಯದರ್ಶಿ-ಸುರೇಶ್ ಬೀಜತಡ್ಕ, ದಯಾನಂದ್ ಬೀಜತಡ್ಕ, ನವೀನ್ ಕೇಪು, ರಾಮಾನಂದ ಕೇಪು, ನಿತೀನ್ ಕೇಪು, ರವಿ ಬೀಜತಡ್ಕ ಆಯ್ಕೆಯಾದರು. ಮಹಿಳಾ ಘಟಕ ಅಧ್ಯಕ್ಷರಾಗಿ ಉಷಾ ಪಡಿಬಾಗಿಲು, ಉಪಾಧ್ಯಕ್ಷರಾಗಿ ಮಲ್ಲಿಕಾ ಬೀಜತಡ್ಕ ಅವರನ್ನು ಆಯ್ಕೆ ಮಾಡಲಾಯಿತು.