ಕೆಂಜಾರು ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸುರಭಿ 2023 ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಅಸೋಸಿಯೇಶನ್ ಆಫ್ ಇನ್ನರ್ ವೀಲ್ ಕ್ಲಬ್ ಇನ್ ಇಂಡಿಯಾದ ಮಾಜಿ ಕಾರ್ಯದರ್ಶಿ ಜಿ.ಜಿ. ಮಿತ್ರಾ ಪ್ರಭು, ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಪ್ರಿಯಾಂಕಾ ಎನ್. ಶೆಟ್ಟಿ, ಪ್ರಾಂಶುಪಾಲ ಡಾ. ಕೆ.ಇ. ಪ್ರಕಾಶ್, ಸಂಚಾಲಕಿ ಸವಿತಾ ಜೆ. ಉಪಸ್ಥಿತರಿದ್ದರು. 
ಜಿಲ್ಲೆ

ಕೆಂಜಾರು ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಾಂಸ್ಕೃತಿಕ ಸಂಭ್ರಮ

ಮಂಗಳೂರು: ನಗರದ ಹೊರ ವಲಯದ ಕೆಂಜಾರಿನಲ್ಲಿರುವ ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸುರಭಿ-2023 ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಅಸೋಸಿಯೇಶನ್ ಆಫ್ ಇನ್ನರ್ ವೀಲ್ ಕ್ಲಬ್ ಇನ್ ಇಂಡಿಯಾದ ಮಾಜಿ ಕಾರ್ಯದರ್ಶಿ ಜಿ.ಜಿ. ಮಿತ್ರಾ ಪ್ರಭು ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ. ಇಂತಹ ಚಟುವಟಿಕೆಗಳು ಅವರ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಸಾಂಸ್ಕೃತಿಕ ಗುಣಮಟ್ಟವನ್ನು ಕೂಡ ಹೆಚ್ಚಿಸುತ್ತದೆ. ಅದರ ಮೌಲ್ಯಗಳು, ಕಲೆ, ಪದ್ಧತಿ, ಭಾಷೆ, ಆಹಾರ ಇತ್ಯಾದಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದರು.

ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಪ್ರಿಯಾಂಕ ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕ ಹಾಗೂ ಪ್ರಾಂಶುಪಾಲ ಡಾ. ಕೆ.ಇ. ಪ್ರಕಾಶ್, ಸಂಚಾಲಕಿ ಸವಿತಾ ಜೆ. ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಂಜನಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಧರಣೀಶ್ ಹೆಗ್ಡೆ ಮತ್ತು ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಸುರಭಿ-2023ರ ವಿದ್ಯಾರ್ಥಿ ಸಂಯೋಜಕಿ ಆಯೀಷಾ ಅಖಿಲಾ ವಂದಿಸಿದರು.

ಉದ್ಘಾಟನಾ ಸಮಾರಂಭದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಿಬೇಟ್, ಬಾಡಿ ಬಿಲ್ಡಿಂಗ್, ಫೋಟೋಗ್ರಫಿ, ಸೋಲೋ ಸಿಂಗಿಂಗ್, ಗ್ರೂಪ್ ಡಾನ್ಸ್, ಪಿಕ್ ಆಂಡ್ ಆಕ್ಟ್, ಕ್ವಿಜ್, ಫೇಸ್ ಪೈಂಟಿಂಗ್, ಪೆನ್ಸಿಲ್ ಸ್ಕೆಚಿಂಗ್, ಮೆಹೆಂದಿ, ಟ್ರಿಷರ್ ಹಂಟ್, ರಂಗೋಲಿ ಮುಂತಾದ ಕಾರ್ಯಕ್ರಮ ಆಯೊಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರ್‌ಜೆ ಅಜಯ ಮುಖ್ಯ ಅತಿಥಿಯಾಗಿದ್ದರು. ರಂಜನ ಹಾಗೂ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಮೂಲ್ಯ ವಂದಿಸಿದರು.