ಮಂಗಳೂರು : ಭಾರತದ ಎರಡನೇ ಅತಿದೊಡ್ಡ ವಾಣಿಜ್ಯ ಬಂದರು ಕಂಪನಿಯಾದ ಜೆಎಸ್‌ಡಬ್ಲುೃ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಣಿ ಬಂದರು ಅಭಿವೃದ್ಧಿಗೆ ಮುಂದಾಗಿದೆ. ಸರ್ವ ಋತು, ಡೀಪ್ ವಾಟರ್ ಹಾಗೂ ಗ್ರೀನ್‌ಫೀಲ್ಡ್ ಬಂದರಾಗಿ ಅಭಿವೃದ್ಧಿ ಪಡಿಸಲು ಜೆಎಸ್‌ಡಬ್ಲ್ಯು ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯು ಬಿಡ್‌ನಲ್ಲಿ ಯಶಸ್ವಿಯಾಗಿದ್ದು ಕರ್ನಾಟಕ ಸರ್ಕಾರದ ಮೆರಿಟೈಮ್ ಬೋರ್ಡ್ ಲೆಟರ್ ಆಫ್ ಅವಾರ್ಡ್ ನೀಡಿದೆ. ಯೋಜನೆಯ ಅಂದಾಜು ವೆಚ್ಚ 4,119 ಕೋಟಿ ರೂ.ಆಗಿದೆ.
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಭಿವೃದ್ಧಿ ಕೆಲಸ ಪ್ರಾರಂಭವಾಗಲಿದೆ. ಅಭಿವೃದ್ಧಿ ಪಡಿಸಿದ ಬಳಿಕ ಕೇಣಿ ಬಂದರು ಈ ಪ್ರದೇಶದ ಹೆಚ್ಚುತ್ತಿರುವ ಆಮದು ಮತ್ತು ರಫ್ತು ವ್ಯಾಪಾರದ ವೇಗವನ್ನು ನಿರ್ಣಾಯಕವಾಗಿ ಪರಿಹರಿಸುವ ನಿರೀಕ್ಷೆ ಇದೆ ಎಂದು
ಜೆಎಸ್‌ಡಬ್ಲುೃ ಇನ್‌ಫ್ರಾಸ್ಟ್ರಕ್ಚರ್‌ನ ಜಂಟಿ ಎಂಡಿ ಮತ್ತು ಸಿಇಒ ಅರುಣ್ ಮಹೇಶ್ವರಿ ತಿಳಿಸಿದ್ದಾರೆ.
ಪ್ರಸ್ತಾವಿತ ಕೇಣಿ ಬಂದರು ಕೇಪ್ ಗಾತ್ರದ ಹಡಗುಗಳನ್ನು ನಿರ್ವಹಿಸಲು ಆಧುನಿಕ ಪರಿಸರ ಸ್ನೇಹಿ ಯಾಂತ್ರಿಕೃತ ಸೌಲಭ್ಯಗಳನ್ನು ಹೊಂದಿರುತ್ತದೆ. ಬಳ್ಳಾರಿ, ಹೊಸಪೇಟೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಗೆ ಸೇವೆ ಸಲ್ಲಿಸಲು ಉತ್ತರ ಕರ್ನಾಟಕ ಪ್ರದೇಶದ ಪಶ್ಚಿಮ ಕರಾವಳಿಯಲ್ಲಿ ಎಲ್ಲ ರೀತಿಯ ಸರಕುಗಳನ್ನು ನಿರ್ವಹಿಸಲು ಸರ್ವ ಋತು , ಬಹು ಸರಕು, ಆಳವಾದ ನೀರಿನ ವಾಣಿಜ್ಯ ಬಂದರು ಎಂದು ಪರಿಗಣಿಸಲಾಗಿದೆ. ಪ್ರಸ್ತಾವಿತ ಬಂದರಿನ ಸಾಮರ್ಥ್ಯವು ಜೆಎಸ್‌ಡಬ್ಲುೃ ಆರಂಭಿಕ ಹಂತದಲ್ಲಿ 30 ಎಂಟಿಪಿಎ ಆಗಿದ್ದು
ದೀರ್ಘಾವಧಿಯಲ್ಲಿ ಗಣನೀಯವಾಗಿ ಹೆಚ್ಚಾಗುವ ಸಾಮರ್ಥ್ಯ ಹೊಂದಿದೆ.
ಪ್ರಸ್ತಾವಿತ ಕೇಣಿ ಬಂದರು ಎರಡು ಪ್ರಮುಖ ಬಂದರುಗಳ ನಡುವೆ ಇದೆ. ಉತ್ತರದಲ್ಲಿ ಮರ್ಮುಗೋವಾ ಬಂದರು ಮತ್ತು ದಕ್ಷಿಣದಲ್ಲಿ ನವಮಂಗಳೂರು ಬಂದರು. ಪ್ರಸ್ತಾವಿತ ಬಂದರಿನ ಒಳಪ್ರದೇಶವು ಪ್ರಾಥಮಿಕವಾಗಿ ಕಲ್ಲಿದ್ದಲು ಮತ್ತು ಕೋಕ್ ಸರಕುಗಳನ್ನು ಹೊಂದಿದೆ. ಕೇಣಿ ಬಂದರು ಸೈಟ್‌ಗೆ ರೈಲು ಸಂಪರ್ಕವನ್ನು ದಕ್ಷಿಣ ಭಾಗದಲ್ಲಿ ಇರುವಂತೆ ಪ್ರಸ್ತಾಪಿಸಲಾಗಿದೆ .ಅಂಕೋಲಾ ನಿಲ್ದಾಣದ ಉತ್ತರಕ್ಕೆ ಅಸ್ತಿತ್ವದಲ್ಲಿರುವ ಕೊಂಕಣ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ಪ್ರಸ್ತಾವಿತ ರೈಲ್ವೆ ಜೋಡಣೆಯನ್ನು ಒಟ್ಟು 8 ಕಿ.ಮೀ ಉದ್ದ ಅಭಿವೃದ್ಧಿ ಪಡಿಸಲಾಗುವುದು. ಪ್ರಸ್ತಾವಿತ ಬಂದರು ರಸ್ತೆ ಮತ್ತು ರೈಲ್ವೆ ಸಂಪರ್ಕದೊಂದಿಗೆ ಉತ್ತಮ ಸಂಪರ್ಕ ಹೊಂದಲಿದೆ.
ಕರ್ನಾಟಕ ಮಾರಿಟೈಮ್ ಪರ್ಸ್ಪೆಕ್ಟಿವ ಪ್ಲಾನ್ ಪ್ರಕಾರ, ಕರ್ನಾಟಕವು ಪ್ರಸ್ತುತ 44 ಎಂಟಿಪಿಎ ಸರಕುಗಳ ಒಳನಾಡು ಸಾಮರ್ಥ್ಯವನ್ನು ಹೊಂದಿದೆ .2035 ರ ವೇಳೆಗೆ 117ಎಂಟಿಪಿಎ ಗೆ ಹೆಚ್ಚಾಗುವ ನಿರೀಕ್ಷೆಯಿದೆ. ಭವಿಷ್ಯದ ಬೇಡಿಕೆ ಮತ್ತು ಪ್ರಸ್ತುತ ಬಂದರುಗಳು ಸರಕು ನಿರ್ವಹಣೆ ಅಗತ್ಯವನ್ನು ಪೂರೈಸಲು ಆಳವಾದ ಬಂದರಿನ ಅವಶ್ಯಕತೆ ಇದೆ. ಎನ್‌ಎಂಪಿಎ ಗಾಗಿ ಪರ್ಯಾಯ ಕೇಣಿ ಬಂದರಿನ ಪರಿಕಲ್ಪನೆಯು ಹೊರಹೊಮ್ಮಿದೆ ಎಂದು ಪ್ರಕಟಣೆ ತಿಳಿಸಿದೆ.
...............................