ಜಿಲ್ಲೆ

ಗುರುಗಳ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯ

ಸಾಸ್ವೆಹಳ್ಳಿ: ಮಾನವೀಯತೆ ಬೆಳೆಸುವಲ್ಲಿ ಗುರುಗಳ ಪಾತ್ರ ಮಹತ್ವದ್ದು, ಅವರ ಮಾರ್ಗದರ್ಶನದಿಂದ ಜೀವನದಲ್ಲಿ ಒಳ್ಳೆಯ ಸ್ಥಾನಮಾನ, ಯಶಸ್ಸು ತಂದುಕೊಡುತ್ತದೆ ಎಂದು ಚನ್ನಗಿರಿ ತಾಲೂಕು ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಹೇಳಿದರು.

ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ವೀರಭದ್ರೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕ ಓಂಕಾರ ನಾಯಕ್ ಮಾತನಾಡಿ, ಶಿಕ್ಷಕ ವೃತ್ತಿಯು ಗೌರವಯುತವಾದ ವೃತ್ತಿಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಗುರುಗಳ ಮೇಲೆ ಇರುತ್ತದೆ. ನಿವೃತ್ತಿಯ ನಂತರ ವಿದ್ಯಾರ್ಥಿಗಳು ನಮ್ಮನ್ನು ತಂದೆ- ತಾಯಿಯಂತೆ ಪ್ರೀತಿಸಿ ಗೌರವಿಸುತ್ತಾರೆ ಎಂದರು.

ವೀರಭದ್ರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಕಾಂತಪ್ಪ, ಕರಿಬಸಪ್ಪ, ಈಶ್ವರ್​ನಾಯ್್ಕ ಲಕ್ಷ್ಮಣಪ್ಪ, ಈಶ್ವರಪ್ಪ, ಹಾಲೇಶಪ್ಪ, ಪಂಚಾಕ್ಷರಯ್ಯ ಮಾತನಾಡಿದರು.

ಶಾಲಾ ಆಡಳಿತ ಮಂಡಳಿ ಸದಸ್ಯರಾದ ಕೆ.ಜಿ. ಸೋಮಶೇಖರಪ್ಪ ಗೌಡ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಸಿ ನಾಗರಾಜ್, ತಾಲೂಕು ಎಸ್​ಡಿಎಂಸಿ ಸಂಘದ ಅಧ್ಯಕ್ಷ ಶಿವಲಿಂಗಪ್ಪ, ಮುಖ್ಯ ಶಿಕ್ಷಕಿ ಕೆ.ಎಂ. ಸುಧಾ ಹಾಗೂ ಶಿಕ್ಷಕರು ಇದ್ದರು.