ಕೆಂಚಮಲ್ಲನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರದುರ್ಗದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ನಡೆ ಪ್ರಗತಿಯ ಕಡೆ ಎಂಬ ಕಾರ್ಯಕ್ರಮಕ್ಕೆ ಡಾ.ಶಫಿಉಲ್ಲಾ ಚಾಲನೆ ನೀಡಿದರು. ಪ್ರಮುಖರಾದ ದಯಾಪೂತ್ತೂರ್ಕರ್, ತಿಪ್ಪೀರಮ್ಮ ಸಕಲಾಪುರದಹಟ್ಟಿ, ಸುರೇಶ್, ಕೆ.ಜಿ.ಬಸವರಾಜ್ .ಮುಖ್ಯಶಿಕ್ಷಕ ಚನ್ನಬಸಪ್ಪ ಇದ್ದರು. 
ಜಿಲ್ಲೆ

ಶಾಲೆ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ

ಕಾನಹೊಸಹಳ್ಳಿ: ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಸಾಹಿತ್ಯಭಿರುಚಿ ಬೆಳಸಿಕೊಳ್ಳಬೇಕು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ.ಶಫಿಉಲ್ಲಾ ಹೇಳಿದರು.

ಸಮೀಪದ ಕೆಂಚಮಲ್ಲನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರದುರ್ಗದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ನಡೆ ಪ್ರಗತಿಯ ಕಡೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಓದು, ಬರಹದೊಂದಿಗೆ ಹಿರಿಯ ಸಾಹಿತಗಳ ಕೃತಿಗಳನ್ನು ಓದಿ

ಓದು, ಬರಹದೊಂದಿಗೆ ಹಿರಿಯ ಸಾಹಿತಗಳ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಸಮಗ್ರ ಪ್ರಗತಿಗೆ ಗ್ರಾಮಸ್ಥರು ಸಹಕಾರ ಮುಖ್ಯವಾಗಿರುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಆಶುಭಾಷಣ ಸರ್ಧೆಯನ್ನು ಏರ್ಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಪಿ.ಬಸಪ್ಪ ವಹಿಸಿಕೊಂಡಿದ್ದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾಪೂತ್ತೂರ್ಕರ್, ಪ್ರಮುಖರಾದ ಶೋಭಾ ಮಲ್ಲಿಕಾರ್ಜುನ್, ಶಿವರುದ್ರಪ್ಪ ಪಂಡ್ರಹಳ್ಳಿ, ಜಯದೇವ ಮೂರ್ತಿ ಶಿಕ್ಷಕ ಕರಿಬಸಪ್ಪ ಮಲ್ಲಿಕಾರ್ಜುನ್ ಶಿಕ್ಷಕಿ ಮಂಜುಳಾ, ಸೌಭಾಗ್ಯಲಕ್ಷ್ಮೀ, ಸತೀಶ್‌ಕುಮಾರ್, ತಿಪ್ಪೀರಮ್ಮ ಸಕಲಾಪುರದಹಟ್ಟಿ, ಸುರೇಶ್, ಕೆ.ಜಿ.ಬಸವರಾಜ್ .ಮುಖ್ಯಶಿಕ್ಷಕ ಚನ್ನಬಸಪ್ಪ ಇದ್ದರು