ಬೇತಮಂಗಲ: ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ಬೇತಮಂಗಲದಲ್ಲಿ ಒಕ್ಕಲಿಗರ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಪುತ್ಥಳಿ ಮೆರವಣಿಗೆ ಅಂಗವಾಗಿ ಸುತ್ತಮುತ್ತಲಿನ ಗ್ರಾಮಗಳಿಂದ ಹೂವಿನ ಪಲ್ಲಕ್ಕಿ, ಟ್ರ್ಯಾಕ್ಟರ್ ವಿವಿಧ ರೀತಿಯಲ್ಲಿ ಕೆಂಪೇಗೌಡರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಬೇತಮಂಗಲದ ವೃತ್ತದಲ್ಲಿ ಟಿ.ಗೊಲ್ಲಹಳ್ಳಿ, ಬಾರ್ಲಿ, ತಿಮ್ಮಾಸಂದ್ರ, ಹಂಗಳ, ಬೇತಮಂಗಲ, ಜಯಮಂಗಲ, ಕಂಗಾನಲ್ಲೂರು, ನತ್ತ, ನಲ್ಲೂರು, ಅಂಕತಟ್ಟಹಳ್ಳಿ, ಹಾಗೂ ವಿವಿಧ ಗ್ರಾಮಗಳ ಪಲ್ಲಕ್ಕಿಗಳು ವಿಜಯೇಂದ್ರ ಸ್ವಾಮಿ ದೇಗುಲದ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ತಮಟೆ, ಬ್ಯಾಂಡ್ಸೆಟ್, ಕೋಲಾಟ ಗಮನ ಸೆಳೆಯಿತು. ಬೇತಮಂಗಲ ಬಸ್ ನಿಲ್ದಾಣದಲ್ಲಿ ಅನ್ನದಾನ, ಮಜ್ಜಿಗೆ, ಇತರೆ ತಂಪು ಪಾನೀಯ ವಿತರಿಸಲಾಯಿತು.
ಮುಖಂಡರಾದ ಬಾರ್ ಸೀನಪ್ಪ, ಶಿವಣ್ಣ, ಹರೀಶ್, ವೇಣುಗೋಪಾಲ್, ಪ್ರಶಾಂತ್, ಶಂಕರ್, ಶಿವ ಪ್ರಸಾದ್, ಡೇರಿ ಮಂಜುನಾಥ್, ನಲ್ಲೂರು ರವಿ, ಆಕಾಶ್, ಯೋಗೆಶ್ಗೌಡ, ಪ್ರದಿಪ್, ಸಂಪಂತ್ ಕುಮಾರ್, ಪ್ರಭಾಕರ್, ವಿಶ್ವನಾಥ್, ಕೋದಂಡರಾಮಯ್ಯ, ಚೌಡಪ್ಪ, ಎಸ್ಆರ್ಒ ಮುರಳಿ, ಡೇರಿ ವೆಂಕಟೇಶ್, ಶ್ರೀನಾಥ್, ಉದಯ್ ಕುಮಾರ್, ಬಾಲಕೃಷ್ಣ, ಶೇಕಿ, ಅಶ್ವತ್ಥಪ್ಪ, ಪ್ರೆಸ್ ಮಂಜು, ಅಂಬರೀಶ್ ಇದ್ದರು.