ದೊಡ್ಡಬೆಳವಂಗಲದ ಜ್ಞಾನವಾಹಿನಿ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಶಾಲೆ ಆಡಳಿತಾಧಿಕಾರಿ ಎಂ.ಜಿ.ವಿನಯ್, ಮುಖ್ಯಶಿಕ್ಷಕಿ ಜ್ಯೋತಿಕುಮಾರಿ ಮತ್ತಿತರರು ಇದ್ದರು. 
ಜಿಲ್ಲೆ

ಜ್ಞಾನವಾಹಿನಿ ಶಾಲೆಯಲ್ಲಿ ಕೆಂಪೇಗೌಡ ಸ್ಮರಣೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಮಧುರೆ
ರಾಜ್ಯದ ಅಗ್ರಗಣ್ಯ ಆಡಳಿತಗಾರರ ಸ್ಥಾನದಲ್ಲಿ ನಾಡಪ್ರಭು ಕೆಂಪೇಗೌಡರು ಮುಂಚೂಣಿಯಲ್ಲಿದ್ದರು ಎಂದು ಜ್ಞಾನವಾಹಿನಿ ಶಾಲೆ ಮುಖ್ಯಶಿಕ್ಷಕಿ ಜ್ಯೋತಿಕುಮಾರಿ ಹೇಳಿದರು. ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲದ ಜ್ಞಾನವಾಹಿನಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ರಾಜಧಾನಿ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ದೂರಾಗಾಮಿ ಚಿಂತನೆಗಳನ್ನು ಒಳಗೊಂಡಿದ್ದ ವಿಶಿಷ್ಟ ನಾಯಕರಾಗಿದ್ದರು ಎಂದು ಬಣ್ಣಿಸಿದರು. ಕೆಂಪೇಗೌಡ ಜಯಂತಿ ಅಂಗವಾಗಿ ಶಾಲಾ ಮಕ್ಕಳು ವಿವಿಧ ವೇಷಭೂಷಣ ಪ್ರದರ್ಶನಗಳು ನಡೆಸಿಕೊಟ್ಟರು.9 ನೇ ತರಗತಿ ವಿದ್ಯಾರ್ಥಿನಿ ಛಾಯಾಲಕ್ಷ್ಮಿ ಹಾಗೂ ಸಂಗಡಿಗರು ಕೆಂಪೇಗೌಡರ ಜೀವನ ಚರಿತ್ರೆಯನ್ನು ಹಾಡಿ ಹೊಗಳಿದರು. ವಿದ್ಯಾರ್ಥಿಗಳು ನೃತ್ಯ ಪ್ರದರ್ಶನದ ಮೂಲಕ ಕೆಂಪೇಗೌಡರ ಸಾಧನೆಯನ್ನು ಪರಿಚಯಿಸಿದರು. ಕೆಂಪೇಗೌಡರ ಉದಾತ್ತ ಗುಣಗಳ ಸ್ಮರಣೆ ನಡೆಯಿತು.