ಜಿಲ್ಲೆ

ಯುವಪೀಳಿಗೆ ವಿದ್ಯೆಯ ಜತೆ ಬದುಕುವ ಕಲೆ ಕಲಿತುಕೊಳ್ಳಿ

ಪವನ್ ಆಚಾರ್ಯ ನೀರ್ಚಾಲು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಯುವಪೀಳಿಗೆ ವಿದ್ಯೆಯ ಜತೆ ಬದುಕುವ ಕಲೆ ಕರಗತಮಾಡಿಕೊಳ್ಳಬೇಕು. ಅದರೊಂದಿಗೆ ವಿನಯತೆ, ಮಾನವೀಯತೆ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ನಂಜಾವಧೂತ ಸ್ವಾಮೀಜಿ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನಾಡಿ ಆಶೀರ್ವಚನ ನೀಡಿದರು.

ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ವತಿಯಿಂದ ವಿ. ವಿ. ಪುರದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಂಸ್ಕಾರವನ್ನು ಕಲಿಯಬೇಕು. ಯಾಕೆಂದರೆ, ಶಿಕ್ಷಣ ಪಡೆದ ಬಳಿಕ ತಮ್ಮ ತಂದೆ&ತಾಯಿಯರನ್ನು ಸಂರಸುವ ಗುಣ, ತನ್ನ ಏಳಿಗೆಗೆ ಬೆನ್ನೆಲುಬಾಗಿ ನಿಂತ ಸಮಾಜಕ್ಕೆ ಹಿಂತಿರುಗಿ ಏನಾದರೂ ಮಾಡಬೇಕೆಂಬ ಚಿಂತನೆಗಳು ಬರುವುದು ಅದರಿಂದ. ಈಗ ಅಂಕಗಳ ಆಧಾರಿತವಾಗಿ ಶಿಕ್ಷಣವನ್ನು ಅಳೆಯಲಾಗುತ್ತಿದೆ. ಆದರೆ, ನಿಜವಾದ ಶಿಕ್ಷಣದಿಂದ ವಿದ್ಯಾರ್ಥಿಯ ಮೌಲ್ಯಗಳು ಹೆಚ್ಚಬೇಕು ಎಂದರು.

ಒಕ್ಕಲಿಗರ ಜಾಗೃತಿ ಸಂದ ಅಧ್ಯಕ್ಷ ಎನ್​.ಮುನಿರಾಜು ಗೌಡ ಮಾತನಾಡಿ, ಆನೇಕಲ್​ನಲ್ಲಿ ತಾಲೂಕುಮಟ್ಟದಲ್ಲಿ ಪ್ರಾರಂಭವಾದ ಸಂ, ಇದೀಗ ರಾಜ್ಯಾದ್ಯಂತ 40 ಶಾಖೆಗಳ ಮೂಲಕ ಬೆಳೆದು ನಿಂತಿದೆ. ನಮ್ಮ ಸಮಾಜದ ಮಕ್ಕಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಇಂಥ ಕಾರ್ಯಕ್ರಮಗಳ ಮೂಲಕ ನಾಡಪ್ರಭು ಕೆಂಪೇಗೌಡರ ಸ್ಮರಣೆ ಸದಾ ನಮ್ಮಲ್ಲಿ ನೆಲೆಯಾಗುವಂತಾಗಲಿ ಎಂದು ತಿಳಿಸಿದರು.

ಒಕ್ಕಲಿಗ ರತ್ನ ಪ್ರಶಸ್ತಿ ಪುರಸತ ಆದಾಯ ತೆರಿಗೆ ಮುಖ್ಯ ಆಯುಕ್ತ, ಜಯರಾಮ್​ ರಾಯಪುರ ಮಾತನಾಡಿ, ಸಾಕಷ್ಟು ದೊಡ್ಡ ಕಂಪನಿಗಳು, ಉದ್ಯಮಿಗಳು ಬೆಂಗಳೂರು ಹಾಗೂ ದಣ ಕನ್ನಡ ಕೇಂದ್ರಿತವಾಗಿ ಬರುವುದಕ್ಕೆ ಕಾರಣ ಇಲ್ಲಿನ ಕಾಸ್ಮೊ ಪಾಲಿಟನ್​ ಕಲ್ಚರ್​. ಉದ್ಯಮಗಳು ಅಭಿವೃದ್ಧಿಹೊಂದಲು ಪೂರಕ ವಾತಾವರಣ ಮುಖ್ಯವಾಗುತ್ತದೆ. ಆದ್ದರಿಂದ ಭವಿಷ್ಯದ ದೃಷ್ಟಿಯಲ್ಲಿ ನಾವು ನಮ್ಮ ಮಕ್ಕಳನ್ನು ಉದ್ಯಮಿಗಳಾಗಿ ಬೆಳೆಯಲು ಪ್ರೋತ್ಸಾಹಿಸಬೇಕು. ಅವರು ನಾಯಕತ್ವ ಗುಣದೊಂದಿಗೆ ನಮ್ಮ ನಾಡಿಗೆ ಆಧಾರವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಒಕ್ಕಲಿಗ ಸಮಾಜದ 650 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂದ ಅಧ್ಯಕ್ಷ ಬಿ.ಕೆಂಚಪ್ಪ ಗೌಡ, ನಿರ್ದೇಶಕ ಉಮಾಪತಿ ಶ್ರೀನಿವಾಸ್​ ಗೌಡ, ಬೆಂಗಳೂರು ಕೇಂದ್ರ ಬಿಜೆಪಿ ಜಿಲ್ಲಾಧ್ಯಕ್ಷ ಎ.ಆರ್​.ಸಪ್ತಗಿರಿ ಗೌಡ, ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸಮಾಜಕ್ಕೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ನಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಸಮುದಾಯದ ಹಕ್ಕೊತ್ತಾಯದಲ್ಲಿ ನಾವೆಷ್ಟು ಹಿಂದಿದ್ದೇವೆ ಎಂದರೆ, ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಮುಂದೆ ನಿಲ್ಲಿಸಲು ನಮಗೆ 70 ವರ್ಷಗಳು ಬೇಕಾಯಿತು. > ಆರ್​.ಅಶೋಕ್​, ವಿಪಕ್ಷ ನಾಯಕ

ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಐಎಎಸ್​ ಅಧಿಕಾರಿ ಕೆ.ಜ್ಯೋತಿ ಅವರಿಗೆ ತ್ಯಾಗಿ ಲಕ್ಷಿ$್ಮದೇವಿ ಪ್ರಶಸ್ತಿ, ನಟ, ಸಂಸದ, ಜಗ್ಗೇಶ್​, ಆದಾಯ ತೆರಿಗೆ ಆಯುಕ್ತ ಜಯರಾಮ್​ ರಾಯಪುರ, ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಗೆ ಒಕ್ಕಲಿಗ ರತ್ನ ಪ್ರಶಸ್ತಿ ಹಾಗೂ ಸಿನಿಮಾ ನಿರ್ಮಾಪಕ ಕೆ.ಮಂಜು, ಸಾವಯವ ಕೃಷಿಕ ಮಧುಚಂದನ್​, ಇತಿಹಾಸಕಾರ ಡಾ.ಅಪ್ಪಾಜಿ ಗೌಡ, ನಿವೃತ್ತ ತಹಸೀಲ್ದಾರ್​ (ಕಂದಾಯ) ನಾಗರಾಜು, ಸಾಹಿತಿ ಬೋರಲಿಂಗಯ್ಯ, ವಿನಯ್​ ದೀಪ್​, ರಂಗಭೂಮಿ ಕಲಾವಿದ ಹನುಮೇಗೌಡ, ಸಮಾಜ ಸೇವಕ ರವೀಂದ್ರ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚೇತನ್​ ಕುಮಾರ್​, ಯುವಾನ್​ದೇವ್​, ಶಕ್ತಿರಾಜ್​, ವಿ.ಕೆ.ತನಿಷ್ಕ, ದರ್ಶನ್​ ನಾರಾಯಣ್​ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.