ಕೆಂಭಾವಿ ಮುಖ್ಯ ಬಜಾರ ಪ್ರದೇಶದ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಯನ್ನು ತಹಸೀಲ್ದಾರ್ ವಿಜಯಕುಮಾರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ದಾಳಿ ಮಾಡಿ ವಶಪಡಿಸಿಕೊಂಡಿತು. ಪಿಎಸ್‌ಐ ವೆಂಕಣ್ಣ ಶಹಾಪುರ, ಕಂದಾಯ ನಿರೀಕ್ಷಕ ರಾಜೇಸಾಬ್, ವಿ.ಎ.ಶಿವರಾಜ, ಬ್ರಹ್ಮದೇವ, ಕಾಶೀನಾಥ ಇದ್ದರು. 
ಜಿಲ್ಲೆ

೪ ಲಕ್ಷಕ್ಕೂ ಅಧಿಕ ಮೌಲ್ಯದ ಸಿಡಿಮದ್ದು ವಶ

ರಾಜು ಯಮಕನಮರಡಿ

ಕೆಂಭಾವಿ: ಪಟ್ಟಣದಲ್ಲಿ ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ತಹಸೀಲ್ದಾರ್ ವಿಜಯಕುಮಾರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಪಟಾಕಿಯನ್ನು ಗುರುವಾರ ವಶಪಡಿಸಿಕೊಂಡಿತು.

ರಾಜ್ ಅಹ್ಮದ್ ಬೈಚಬಾಳ ಅವರ ಎಲೆಕ್ಟ್ರಿಕ್ ಅಂಗಡಿ ಮೇಲೆ ದಾಳಿ ಮಾಡಿ ಸಂಗ್ರಹಿಸಿಟ್ಟಿದ್ದ ಪಟಾಕಿ ವಶಪಡಿಸಿಕೊಂಡು ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಇನ್ನೂ ಮೂರು ದಿನಗಳ ಕಾಲ ಈ ಕಾರ್ಯಾಚರಣೆ ನಡೆಯಲಿದ್ದು, ಅನಧಿಕೃತವಾಗಿ ಪಟಾಕಿ ಸಂಗ್ರಹಿಸಿದ್ದನ್ನು ಕಂಡು ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗವುದು ಎಂದು ತಹಸೀಲ್ದಾರ್ ವಿಜಯಕುಮಾರ ತಿಳಿಸಿದರು.

ಅಪರಾಧ ಪಿಎಸ್‌ಐ ವೆಂಕಣ್ಣ ಶಹಾಪುರ, ಕಂದಾಯ ನಿರೀಕ್ಷಕ ರಾಜೇಸಾಬ್, ವಿ.ಎ.ಶಿವರಾಜ, ಬ್ರಹ್ಮದೇವ, ಕಾಶೀನಾಥ, ಪುರಸಭೆ ಮೇಲ್ವಿಚಾರಕಿ ಶೋಭಾ, ಭೀಮಣ್ಣ ಇದ್ದರು.