ಜಿಲ್ಲೆ

ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲಿ

ವೀರೇಶ ಸೌದ್ರಿ

ಶಿಗ್ಗಾಂವಿ: ಡೆಂಘ, ಚಿಕೂನ್​ಗುನ್ಯಾ ಕಾಯಿಲೆಗಳ ನಿಯಂತ್ರಣ ಸಾರ್ವಜನಿಕರ ಕೈಯಲ್ಲಿದೆ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಟಾಸ್ಕ್ ಫೋರ್ಸ್ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಪಂ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಎ.ಆರ್. ಮಾತನಾಡಿ, ಫ್ರಿಜ್, ಏರ್​ಕೂಲರ್, ಅಲಂಕೃತ ಗೀಡಗಳ ಕಾಂಡಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಡೆಂಘ ಹರಡದಂತೆ ಎಚ್ಚರ ವಹಿಸಬೇಕು. ಜತೆಗೆ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು ಎಂದರು.

ಇಒ ಪಿ.ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶಬಾಬು ದಿಕ್ಷೀತ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್., ಆರೋಗ್ಯ ಇಲಾಖೆಯ ಡಾ. ಸುರೇಶ ಪೂಜಾರ, ಡಾ. ಗೈಬು ನಾಯಕರ, ಡಾ. ಸರಳಾ ನಾಲವಾಡ, ಡಾ. ನೇಮಾವತಿ, ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ರಾಮನಗೌಡ ಪಾಟೀಲ ಇತರರು ಇದ್ದರು.