ಅರಕೇರಾ ಸಮೀಪದ ಚಿಕ್ಕಹೊನ್ನಕುಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಕನಕಪ್ಪ ಉದ್ಘಾಟಿಸಿದರು. ಎಸ್‌ಕೆಡಿಆರ್‌ಡಿಪಿ ಕೃಷಿ ಅಧಿಕಾರಿ ಹುಚ್ಚಪ್ಪ, ವಲಯ ಮೇಲ್ವಿಚಾರಕ ಮಂಜಯ್ಯ, ಶಿಕ್ಷಕರಾದ ಅಂಜಿನಯ್ಯ, ಶಕುಂತಲಾ, ರೂಪಾ, ರೆಡ್ಡಿಸಾಬ್, ಸೇವಾ ಪ್ರತಿನಿಧಿಗಳಾದ ಶ್ರೀದೇವಿ, ಮಾನಸಪ್ಪ, ಯುವರಾಜ ಇತರರಿದ್ದರು. 
ಜಿಲ್ಲೆ

ಸುತ್ತಲಿನ ಪರಿಸರ ಸ್ವಚ್ಛವಾಗಿರಲಿ

ಗಾಯತ್ರಿ ಮಾಲಿಪಾಟೀಲ್

ಅರಕೇರಾ: ಪರಿಸರ ರಕ್ಷಿಸಿದರೆ ಸಕಲ ಜೀವರಾಶಿಗಳು ಸುಖವಾಗಿ ಬದುಕಲು ಸಾಧ್ಯ ಎಂದು ಎಸ್‌ಕೆಡಿಆರ್‌ಡಿಪಿ ಕೃಷಿ ಅಧಿಕಾರಿ ಹುಚ್ಚಪ್ಪ ಹೇಳಿದರು.

ಸಮೀಪದ ಚಿಕ್ಕಹೊನ್ನಕುಣಿ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಮಂಡಲದಲ್ಲಿ ವಾಸಮಾಡುವ ಜೀವಿಗಳ ಉಸಿರಾಟಕ್ಕೆ ಮುಖ್ಯವಾದ ಗಾಳಿ ಪರಿಸರದಿಂದ ಮಾತ್ರ ದೊರೆಯುತ್ತದೆ. ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು. ಮುಖ್ಯಶಿಕ್ಷಕ ಕನಕಪ್ಪ ಮಾತನಾಡಿ, ಸಕಲ ಜೀವರಾಶಿಗಳು ಪರಿಸರವನ್ನೇ ಅವಲಂಬಿಸಿವೆ. ಆದ್ದರಿಂದ ಶಾಲೆ, ಮನೆ ಹಾಗೂ ಸುತ್ತಲೂ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದರು. ವಲಯ ಮೇಲ್ವಿಚಾರಕ ಮಂಜಯ್ಯ, ಶಿಕ್ಷಕರಾದ ಅಂಜಿನಯ್ಯ, ಶಕುಂತಲಾ, ರೂಪಾ, ರೆಡ್ಡಿಸಾಬ್, ಸೇವಾ ಪ್ರತಿನಿಧಿಗಳಾದ ಶ್ರೀದೇವಿ, ಮಾನಸಪ್ಪ, ಯುವರಾಜ ಇತರರಿದ್ದರು.