ಹುಬ್ಬಳ್ಳಿ: ದೇವರ ಪ್ರಸಾದ ಪವಿತ್ರವಾದದ್ದು. ನಂಬಿಕೆ, ವಿಶ್ವಾಸ ಭಾವನೆಯಿಂದ ಕೂಡಿರುವುದಾಗಿದೆ. ಇಂತಹ ವಸ್ತುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಅದರ ಪಾವಿತ್ರ್ಯತೆ ಕಾಪಾಡಬೇಕು ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಗನ್ ಮೋಹನ್ ರೆಡ್ಡಿ ಅವರ ತಂದೆ ತಿರುಪತಿಯ ಏಳು ಗುಡ್ಡಗಳ ಪೈಕಿ ಐದು ಗುಡ್ಡಗಳ ನಿರ್ವಹಣೆ ಹಾಗೂ ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಸಹ ಕ್ರಿಶ್ಚಿಯನ್ ಸಮುದಾಯದವರಿಗೆ ನೀಡಿದ್ದರು. ಇದರ ಪರಿಣಾವನ್ನು ವೈ.ಎಸ್.ಆರ್. ರೆಡ್ಡಿ ಅನುಭವಿಸಿದರು ಎಂದರು.
ಮುಡಾ ಹಗಣದ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಮುಖ್ಯಮಂತ್ರಿ ನ್ಯಾಯಾಲಯದ ಆದೇಶಕ್ಕೆ ತಲೆಬಾಗಬೇಕು. ಸಿಎಂ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.