ಜಿಲ್ಲೆ

ಕೀಲಾರ ಗ್ರಾಪಂ ಅಧ್ಯಕ್ಷರಾಗಿ ಕೆ.ಶಿವಶಂಕರ್ ಆಯ್ಕೆ: ಅಂತಾರಾಷ್ಟ್ರೀಯ ಜಾನಪದ ಕಲಾವಿದನಿಗೊಲಿದ ಅಧಿಕಾರ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಕೀಲಾರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದದವರೂ ಆದ ಅಂತಾರಾಷ್ಟ್ರೀಯ ಜಾನಪದ ನೃತ್ಯ ಕಲಾವಿದ ಹಾಗೂ ತರಬೇತುದಾರ ಕೆ.ಶಿವಶಂಕರ್ ಅವಿರೋಧವಾಗಿ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷ ಬೇಬಿ ಅವರು ನಿಧನರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಂತೆಯೇ ಶಿವಶಂಕರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಗಿರೀಶ್ ಅವಿರೋಧದ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ನಮ್ಮ ಕೀಲಾರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ನೂತನ ಅಧ್ಯಕ್ಷರು ಮತ್ತು ಸದಸ್ಯರು ಶ್ರಮಿಸಲಿ ಎಂದು ಹಾರೈಸಿದರು.

ಅಧ್ಯಕ್ಷ ಶಿವಶಂಕರ್ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕೆ.ಎಸ್.ವಿಜಯಾನಂದ ಅವರ ನೇತೃತ್ವದಲ್ಲಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಶಿಕ್ಷಣ, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಗ್ರಾಮವನ್ನು ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ರಮೇಶ್, ಪುನೀತ್, ಲಕ್ಷ್ಮೀ, ಸುಶೀಲಾ, ಶಶಿಕಲಾ, ಮುಖಂಡರಾದ ಕೆ.ಆರ್.ಶಂಕರ್, ಕೃಷ್ಣೇಗೌಡ, ಶಿವರಾಮ ಕೆ.ಆರ್.ರವಿಕಾಂತ್, ಯೋಗಾನಂದ, ಮಹೇಂದ್ರಗೌಡ, ನಿತ್ಯಾನಂದ, ಕೃಷ್ಣಪ್ಪ, ರಾಮಕೃಷ್ಣ ಇದ್ದರು.