ಗ್ಯಾಂಗ್ ಕಿಂಗ್‌ಪಿನ್ ಕೈಚಳಕದ ಶಂಕೆ | ಮತ್ತೆ ದಂಧೆ ಶುರುವಿಟ್ಟ ಆರ್.ಡಿ.ಪಾಟೀಲ್:!;ಕಿಂಗ್ ಪಿನ್ ಹೆಸರು ಹೇಳಿದ ಅಭ್ಯರ್ಥಿ ಕಡೆಯವರು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ ಜನಮಾನಸದಿಂದ ಮಾಸುವ ಮುನ್ನವೇ ಕಲ್ಯಾಣ ಕರ್ನಾಟಕದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶನಿವಾರ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನಡೆಸಿದ ಪರೀಕ್ಷೆಯಲ್ಲೂ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಮತ್ತೊಂದು ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಸದ್ದು ಮಾಡಿದೆ.
ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಜಿಲ್ಲಾಡಳಿತ, ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟಿದ್ದರೂ ಬ್ಲೂಟೂತ್ ಪತ್ತೆಯಾಗಿರುವುದು ಸೋಜಿಗದ ಜತೆಗೆ ಎಲ್ಲರನ್ನು ಹೌಹಾರುವಂತೆ ಮಾಡಿದೆ. ಆಡಳಿತ ವ್ಯವಸ್ಥೆ ಚಾಪೆ ಕೆಳಗೆ ತೂರಿದರೆ, ಅಕ್ರಮ ನಡೆÀಸುವವರು ರಂಗೋಲಿ ಕೆಳಗೆ ತೂರಿ ತಮ್ಮ ಕೆಲಸ ಸಾಧಿಸಲು ಹೋಗಿ ಸಿಕ್ಕಿ ಬಿದಿದ್ದಾರೆ.
ನಗರದ ಖಾಸಗಿ ಕಾಲೇಜು ಕೇಂದ್ರದಲ್ಲಿ ಸರ್ಕಾರದ ನಿಗಮ-ಮಂಡಳಿಗಳ ವಿವಿಧ ಖಾಲಿ ಹುz್ದೆಗಳ ಭರ್ತಿಗೆ ಜರುಗಿದ ಪರೀಕ್ಷೆಯಲ್ಲಿ ತ್ರಿಮೂರ್ತಿ ಎಂಬಾತ ಬ್ಲೂಟೂತ್ ಬಳಸಿ ಉತ್ತರ ಬರೆಯುತ್ತಿರುವುದು ಪತ್ತೆಯಾಗಿದೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದಾಗ ಅಭ್ಯರ್ಥಿ ತ್ರಿಮೂರ್ತಿ ಸಹೋದರ, ಅಂಬರೀಶ್ ಎಂಬಾತ ಪರೀಕ್ಷಾ ಕೇಂದ್ರದ ಹೊರಗಡೆ ಕಾರಿನಲ್ಲಿ ಕುಳಿತು ಉತ್ತರ ಹೇಳುತ್ತಿದ್ದ ಎಂದು ತಿಳಿಸಿದ್ದಾರೆ. ಅಂಬರೀಶ್‌ಗೆ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಗ್ಯಾಂಗಿನವರು ಸಹಾಯ ಮಾಡುತ್ತಿದ್ದರು ಎಂದು ಬಾಯಿಬಿಟ್ಟಿದ್ದಾನೆ.
ಇನ್ನು ಯಾದಗಿರಿ ಸರ್ಕಾರಿ ಪದವಿಪೂರ್ವ ಕಾಲೇಜು ಸುತ್ತ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆರೇಳು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರಲ್ಲಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪುಟ್ಟಪ್ಪ ಎಂಬಾತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ವಿಚಾರಣೆ ನಡೆಸಿದ್ದಾರೆ.
ಎರಡು ದಿನಗಳ ಕಾಲ ಜರುಗಲಿರುವ ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷೆಯಲ್ಲಿ ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲï ಗ್ಯಾಂಗಿನವರು ಈ ಅಕ್ರಮ ನಡೆಸಿರುವ ಶಂಕೆ ಪೊಲೀಸರಲ್ಲಿ ಬಲವಾಗಿದೆ. ಈ ಹಿಂದೆ ಪಿಎಸ್‌ಐ ನೇಮಕ ಪರೀಕ್ಷೆಯ ಅಕ್ರಮದಲ್ಲಿ ಆರ್.ಡಿ.ಪಾಟೀಲ್ ಬಂಧನವಾಗಿ ಜೈಲಿಗೆ ಹೋಗಿದ್ದ ಬಂದಿದ್ದ. ಬಂದ ನಂತರ ಮತ್ತೇ ತನ್ನ ಹಳೆಯ ಚಾಳಿಯನ್ನು ಶುರುವಿಟ್ಟಿದ್ದಾನೆ ಎಂಬ ಸಂಶಯ ಪೊಲೀಸರನ್ನು ಕಾಡುತ್ತಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತನಾಗಿರುವ ತ್ರಿಮೂರ್ತಿ ಆರ್.ಡಿ.ಪಾಟೀಲ್ ಹೆಸರು ಹೇಳಿಕೊಂಡಿದ್ದಾನೆ. ಇದರಿಂದಾಗಿ ಹಿಂದಿನ ಅಕ್ರಮ ಜಾಲ ಮತ್ತೇ ಸಕ್ರಿಯಗೊಂಡಿರುವAತಿದೆ.
ವೈದ್ಯರ ಬಳಿಗೆ ಹೋಗಿ ಬ್ಲೂತ್ ಟೂಥ್ ತೆಗೆಸಿದರು
ಕಲಬುರಗಿ ನಗರದ ಖಾಸಗಿ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ತ್ರಿಮೂರ್ತಿ ಎಂಬಾತ ಸಿಕ್ಕು ಬಿದ್ದಾಗ, ಅಲ್ಲಿನ ಉಸ್ತುವಾರಿಗಳ ಮಾಹಿತಿಯಂತೆ ಪೊಲೀಸರು ವಶಕ್ಕೆ ತೆಗೆದುಕೊಂಡು ಕಿವಿಯಲ್ಲಿನ ಡಿವೈಎಸ್ ತೆಗೆಯಲು ಪ್ರಯತ್ನಿಸಿದರೂ ಬರಲಿಲ್ಲ. ಹೀಗಾಗಿ ಟಿ.ಎ.ಪಾಟೀಲ್ ಇಎನ್‌ಟಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಅಶೋಕ ಪಾಟೀಲ್ ಅವರ ಬಳಿ ಕರೆದುಕೊಂಡು ಹೋಗಿ ಕಿವಿಯಲ್ಲಿನ ಬ್ಲೂ ಟೂತ್ ತೆಗೆಸಿದರು. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.