ಹಟ್ಟಿಯಂಗಡಿ ಗ್ರಾ.ಪಂನ 2024-25ನೇ ಸಾಲಿನ ಪ್ರಥಮ ಕೆಡಿಪಿ ತ್ರೈಮಾಸಿಕ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು 
ಜಿಲ್ಲೆ

ಹಟ್ಟಿಯಂಗಡಿ ಗ್ರಾಪಂ ಕೆಡಿಪಿ ತ್ರೈಮಾಸಿಕ ಸಭೆ

ಇಂದಿರಾ ಎನ್ ಕೆ

ಕುಂದಾಪುರ: ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಪ್ರಥಮ ಕೆಡಿಪಿ ತ್ರೈಮಾಸಿಕ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಹಟ್ಟಿಯಂಗಡಿ ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀ ಅಧ್ಯಕ್ಷತೆ ವಹಿಸಿ, ಕೆಡಿಪಿ ತ್ರೈಮಾಸಿಕ ಸಭೆಯ ಮಹತ್ವದ ಕುರಿತು ವಿವರಿಸಿದರು. ಬಳಿಕ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಸಬ್ಲಾಡಿ, ಪಿಂಗಾಣಿಗುಡ್ಡೆ, ಕನ್ಯಾನ ಭಾಗದಲ್ಲಿರುವ ಕೆಸಿಡಿಸಿ ಜಾಗದಲ್ಲಿ ಸಮರ್ಪಕ ಸ್ವಚ್ಛತಾ ಕಾರ್ಯ ನಡೆಯದಿದ್ದು, ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಚರ್ಚಿಸಲಾಯಿತು.

ಉಪಾಧ್ಯಕ್ಷ ಪ್ರತಾಪ್ ಕುಮಾರ್ ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕುಮಾರ್, ಗ್ರಾಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಲೋಕೇಶ್ ನಾಯ್ಕ ಸ್ವಾಗತಿಸಿದರು. ಕಾರ‌್ಯದರ್ಶಿ ಸುರೇಶ್ ಪೂಜಾರಿ ವಂದಿಸಿದರು.