ಜಿಲ್ಲೆ

ಕೆಸಿಸಿಐನಿಂದ ರೈಲ್ವೆ ಇಲಾಖೆಗೆ ಮನವಿ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸೇರಿ ಈ ಭಾಗದಲ್ಲಿ ರೈಲು ಸೇವೆಯಲ್ಲಿ ಆಗಬೇಕಿರುವ ಸುಧಾರಣೆ ಹಾಗೂ ಸೌಲಭ್ಯಗಳ ಕುರಿತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ತಿಂಗಳು ನಡೆಯಲಿರುವ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯಗಳನ್ನು ಚಚಿರ್ಸಿ ಈಡೇರಿಸಬೇಕೆಂದು ಕೋರಲಾಯಿತು.

ಧಾರವಾಡದಲ್ಲಿ ವಂದೇ ಭಾರತ ರೈಲಿನ ಯುನಿಟ್ ಆರಂಭಿಸಬೇಕು. ಡೇಮು (ಡೀಸೆಲ್ ಇಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಸ್ಥಾಪಿಸಬೇಕು. ಹುಬ್ಬಳ್ಳಿ& ಪುಣೆ ವಂದೇ ಭಾರತ ರೈಲು ಆರಂಭಿಸುವುದು, ಧಾರವಾಡದ ನವಲೂರಲ್ಲಿ ಕಂಟೇನರ್ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಸವಲತ್ತುಗಳನ್ನು ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಕೆಸಿಸಿಐ ಅಧ್ಯ ವಿನಯ ಜವಳಿ, ಮಾಜಿ ಉಪಾಧ್ಯ ಜಿ.ಕೆ. ಆದಪ್ಪಗೌಡರ, ಸದಸ್ಯರಾದ ಮಹೇಂದ್ರ ಸಿಂಘಿ, ಡಿ.ಆರ್. ರಾಠಿ, ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯ ರವಿಕುಮಾರ ಉಪಸ್ಥಿತರಿದ್ದರು.