ಜಿಲ್ಲೆ

ಕೆಬಿಎಸ್ ಬ್ಯಾಂಕ್ ವಿರುದ್ಧ ಗುಂಡೂರಕರ್ ಸುಳ್ಳು ಆರೋಪ

ಬಾಬುರಾವ ಯಡ್ರಾಮಿ

ವರ್ಗಾವಣೆಗೊಂಡಿದ್ದಕ್ಕೆ ಮಸಿ ಹಚ್ಚುವ ಕೆಲಸ ಮಾಡುತ್ತಿರುವ ಗುಂಡೂರಕರ್

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕೆಬಿಎಸ್ ಬ್ಯಾಂಕ್ ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕರ್ನಾಟಕ ಯುವ ಶಕ್ತಿ ಸೈನ್ಯದ ಅಧ್ಯP್ಷÀ ಲಿಂಗರಾಜ ಗುಂಡೂರಕರ್ ಸುಳ್ಳು ಮಾಡಿರುವ ಆರೋಪ ಮಾಡಿರುವ ಆರೋಪ ಸಂಪೂರ್ಣ ಸುಳ್ಳಾಗಿದೆ. ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಗುಂಡೂರಕರ್ ಕೆಬಿಎಸ್ ಬ್ಯಾಂಕಿನಲ್ಲಿ ಕಲಬುರಗಿ ಶಾಖೆಯಲ್ಲಿ ೧೮ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈಚೆಗೆ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಮಾನವ ಸಂಪನ್ಮೂಲ ನಿಯಮದಂತೆ ಆಡಳಿತಾತ್ಮಕ ಕಾರಣಗಳಿಂದ ಅವರನ್ನು ಕಲಬುರಗಿ ಶಾಖೆಯಿಂದ ಆಂಧ್ರಪ್ರದೇಶದ ಚಿರಾಲಾ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಅವರು ಬ್ಯಾಂಕಿನ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬ್ಯಾಂಕಿನ ಜನರಲ್ ಮ್ಯಾನೇಜರ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರ್ಗಾವಣೆ ಆದೇಶವನ್ನು ರದ್ದುಗೊಳಿಸಲು ಒತ್ತಡ ಹೇರುವ ಸಲುವಾಗಿ ಅವರು ಬ್ಯಾಂಕಿನ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಬ್ಯಾಂಕಿನ ಆಡಳಿತದೊಳಗಿನ ದೂರು ಪರಿಹಾರ ವ್ಯವಸ್ಥೆ ಕಡೆಗಣಿಸಿ ಅವರೇ ಸ್ಥಾಪಿಸಿದ ಕರ್ನಾಟಕ ಯುವ ಶಕ್ತಿ ಸೈನ್ಯ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಸುಳ್ಳುಆರೋಪ ಮಾಡಿz್ದÁರೆ. ಠೇವಣಿಗಳ ಭದ್ರತೆ ಬಗ್ಗೆ ತಪ್ಪು ಮಾಹಿತಿ ನೀಡುವುದು ವದಂತಿ ಹರಡಿಸಿ ಸಾರ್ವಜನಿಕರಲ್ಲಿ ಇಲ್ಲದ ತಮ್ಮ ಭಾವನೆ ಹುಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಅವರನ್ನು ಕಮಲಾಪುರ ಶಾಖೆಯಿಂದ ಚೌಡಾಪುರ ಶಾಖೆಗೆ ವರ್ಗಾವಣೆ ಮಾಡಿz್ದÁಗ ಪ್ರತಿಭಟನೆ ನಡೆಸಿದ್ದರು. ೧೮ ವರ್ಷಗಳ ಸೇವೆಯಲ್ಲಿ ಅವರು ಯಾವುದೇ ಸಿಬ್ಬಂದಿ ಶೋಷಣೆ ಬಗ್ಗೆ ಎಲ್ಲಿಯೂ ದೂರು ನೀಡಿಲ್ಲ. ಈ ರೀತಿಯ ಆರೋಪ ಮಾಡುತ್ತಿರುವುದು ವರ್ಗಾವಣೆ ಸಮಯದಲ್ಲಷ್ಟೇ ಹೀಗಾಗಿ ಅವರ ಮಾತಿಗೆ ಗಮನ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.

ದೇಶದ ೧೭೬೬ ಹಳ್ಳಿಗಳ ಬಡ ಜನರಿಗೆ ಆರ್ಥಿಕ ಒಳಗೊಳ್ಳುವಿಕೆ ಹಾಗೂ ಮೈಕ್ರೋ ಫೈನಾನ್ಸ್ ಸೇವೆ ಸಲ್ಲಿಸುವ ಕೆಬಿಎಸ್ ಬ್ಯಾಂಕ್ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಕಲ್ಯಾಣಕ್ಕೆ ಬದ್ಧವಾಗಿದೆ. ಲಿಂಗರಾಜ ಗುಂಡೂರಕರ್ ನಡೆಸಿದ ಪ್ರತಿಭಟನೆ, ಮಾಡಿದ ಆರೋಪ ಬ್ಯಾಂಕ್ ಅಲ್ಲಗೆಳೆಯುತ್ತದೆ. ಈ ರೀತಿ ವರ್ತಿಸುವ ಮೂಲಕ ಬ್ಯಾಂಕಿನ ಶಿಸ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ್ದು, ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಅವರ ವಿರುದ್ಧ ಬ್ಯಾಂಕ್ ಸಿವಿಲï ಹಾಗೂ ಕ್ರಿಮಿನಲï ದಾವೆ ಹೂಡಲು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

==