ಕಾಸರಗೋಡು: ಬಂದ್ಯೋಡು ಸನಿಹದ ಕಯ್ಯರು ಕ್ರಿಸ್ತರಾಜ ಇಗರ್ಜಿಯ ವಾರ್ಷಿಕ ಮಹೋತ್ಸವ ಹಾಗೂ ಪರಮ ಪ್ರಸಾದದ ಮೆರವಣಿಗೆ ಇತ್ತೀಚೆಗೆ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ಗ್ಲಾೃಡ್ಸಮ್‌ನ ನಿರ್ದೇಶಕ ಹ್ಯಾರಿ ಡಿಸೋಜ ದಿವ್ಯ ಬಲಿಪೂಜೆ ಹಾಗೂ ಪರಮ ಪ್ರಸಾದದ ವಿಧಿ ವಿಧಾನ ನೆರವೇರಿಸಿದರು. ಕಯ್ಯರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ವಿಶಾಲ್ ಮೋನಿಸ್, ಪೆರ್ಮುದೆ ಸಂತ ಲೋರೆನ್ಸ್ ಚರ್ಚ್ ಧರ್ಮಗುರು ಹೆರಾಲ್ಡ್ ಡಿಸೋಜ, ಸಹಾಯಕ ಧರ್ಮಗುರು ಕ್ಲೋಡ್ ಕೋರ್ಡಾ, ಮೈಸೂರು ಪುಷ್ಪಾಶ್ರಮದ ಡೀನ್ ಓಸ್ವಾಲ್ಡ್ ಕ್ರಾಸ್ತ ಉಪಸ್ಥಿತರಿದ್ದರು.
ಬಲಿಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ಕಯ್ಯರು ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಝೀನಾ ಡಿಸೋಜ ಹಾಗೂ ಪಾಲನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.