ಕಾರಡ್ಕ ಶಾಲೆಯಲ್ಲಿ ನಡೆದ ಕಯ್ಯರ ಜನ್ಮದಿನಾಚರಣೆಯಲ್ಲಿ ಹಿರಿಯ ಶಿಕ್ಷಕಿ ಬೇಬಿ ರೇಖಾ, ನೌಕರ ಸಂಘದ ಕಾರ್ಯದರ್ಶಿ ಶಶಿ ಮಾಸ್ತರ್, ಶೋಭನಾ ಟೀಚರ್ ಉಪಸ್ಥಿತರಿದ್ದರು. 
ಜಿಲ್ಲೆ

ಕಯ್ಯರ ಕಿಞ್ಞಣ್ಣ ರೈ ಅಭಿಮಾನದ ವ್ಯಕ್ತಿತ್ವ: ಮುಖ್ಯಶಿಕ್ಷಕ ಸಂಜೀವ ಎಂ. ಅನಿಸಿಕೆ

ಸೌಮ್ಯ ಆರ್

ಮುಳ್ಳೇರಿಯ: ಕಾಸರಗೋಡಿನವರ ಪಾಲಿಗೆ ಕಯ್ಯರ ಕಿಞಣ್ಣ ರೈಗಳು ಅಭಿಮಾನದ ವ್ಯಕ್ತಿತ್ವವಾಗಿದ್ದಾರೆ. ಇಂತಹವರ ಜನ್ಮದಿನಾಚರಣೆಯ ಮೂಲಕ ನಾವು ಪ್ರೇರಣೆ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕಾರಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕ ಸಂಜೀವ ಎಂ.ಹೇಳಿದರು.

ಶಾಲೆಯಲ್ಲಿ ನಡೆದ ಕಯ್ಯರ ಕಿಞಣ್ಣ ರೈ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಕನ್ನಡ ವಿಭಾಗದ ಹಿರಿಯ ಶಿಕ್ಷಕಿ ಬೇಬಿ ರೇಖಾ, ನೌಕರ ಸಂಘದ ಕಾರ್ಯದರ್ಶಿ ಶಶಿ ಮಾಸ್ತರ್, ಶೋಭನಾ ಟೀಚರ್ ಉಪಸ್ಥಿತರಿದ್ದರು.

ಶಿಕ್ಷಕ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಕವಿ ಪರಿಚಯದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಕೀರ್ತನ ಕವಿ ಪರಿಚಯ ಮಾಡಿಕೊಟ್ಟರು. ಪೃಥ್ವಿರಾಜ್ ಅವರಿಂದ ಸ್ಲೈಡ್ ಶೋ ನಡೆಯಿತು. ಅನಘಾ ಸರಸ್ವತಿ ಪುಸ್ತಕ ಆಸ್ವಾದನ ಟಿಪ್ಪಣಿ ಮಂಡಿಸಿದರು. ಕವಿ ಕೈಯಾರರ ಗುರು ಸಮಾನರಾದ ರಾಷಟ್ರೆಕವಿ ಮಂಜೇಶ್ವರ ಗೋವಿಂದ ಪೈ ಯವರ ಪರಿಚಯವನ್ನು ಯುಕ್ತಿ ಮಂಡಿಸಿದರು. ಕವಿ ಕೈಯಾರರ ಪ್ರಸಿದ್ಧ ಕವನ ’ಸಂತೆಗೆ ಹೋದನು ಭೀಮಣ್ಣ’ ಇದರ ರೂಪಕವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ದೇವಿಕಾ ಅವರ ಹಾಡು ಹಾಗೂ ಇನಿಶಾ, ಜಗತ್ ಮತ್ತು ಕೀರ್ತೇಶ್ ಅವರ ಅಭಿನಯ ರೂಪಕದ ಯಶಸ್ಸಿಗೆ ಕಾರಣವಾಯಿತು. ಧನುಶ್ರೀ ಕವಿತೆ, ಶ್ರೇಯಾ ಭಾಷಣ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ಅಭಿನಯ ಗೀತೆ ಮೆಚ್ಚುಗೆ ಪಡೆದವು. ವೀಕ್ಷಿತಾ ಸ್ವಾಗತಿಸಿ, ಕೀರ್ತನ ವಂದಿಸಿದರು. ಮೋನಿಷಾ ನಿರೂಪಿಸಿದರು.