ಬೆಂಗಳೂರು: ಅಂತರಂಗ ಹವ್ಯಾಸಿ ನಾಟಕ ತಂಡದ ಕಲಾವಿದರು ಎಚ್. ಡುಂಡಿರಾಜ್ ರಚನೆಯ 'ಕಾಯುವ ಕಾಯಕ' ನಾಟಕವನ್ನು ಅರ್ಚನಾ ಶ್ಯಾಮ್ ನಿದೇಶನದಲ್ಲಿ ಶನಿವಾರ (ಏ.6) ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕೆ ಮುಂತಾದ ಸಂಗತಿಗಳು ನಾಟಕದಲ್ಲಿ ವ್ಯಕ್ತವಾಗಲಿವೆ. ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ವಿವರಕ್ಕೆ ದೂ: 98809 14509 ಸಂಪರ್ಕಿಸಿ.