ವಿಜಯಪುರ ನಗರದ ರಾಧಾಕೃಷ್ಣನ್ ಬಡಾವಣೆಯಲ್ಲಿರುವ ಶಿವಬಸವ ಯೋಗಾಶ್ರಮದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎಸ್.ವಿ.ನಾಡಗೌಡ ಉದ್ಘಾಟಿಸಿದರು. ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಮೀನಾಕ್ಷಿ ಬಿರಾದಾರ, ಡಾ. ಎಸ್.ಐ. ಮೇತಿ, ಪ್ರೊ.ಯು.ಎನ್. ಕುಂಟೋಜಿ, ಪ್ರೊ.ಶರಣಗೌಡ ಪಾಟೀಲ ಇನ್ನಿತರರಿದ್ದರು.  
ಜಿಲ್ಲೆ

ವಿಜಯಪುರ : ಕಾಯಕ ಸದ್ಭಾವಿ ನುಲಿಯ ಚಂದಯ್ಯ

Bellari - Heera Nayak

ವಿಜಯಪುರ : ಶಿವಶರಣರಲ್ಲಿ ನುಲಿಯ ಚಂದಯ್ಯ ಅತ್ಯುಚ್ಚಮಟ್ಟದ ಜ್ಞಾನಾನುಭವಿಯೆಂದು, ಕಾಯಕಸದ್ಭಾವಿಯೆಂದು ಕೀರ್ತಿತನಾಗಿದ್ದಾನೆ. ಬಸವ ಪುರಾಣ, ಶೂನ್ಯ ಸಂಪಾದನೆ, ಶಿವತತ್ವ ಚಿಂತಾಮಣಿ ಮೊದಲಾದ ಗ್ರಂಥಗಳಲ್ಲಿ ವಿಸ್ತಾರವಾಗಿಯೂ, ಚನ್ನಬಸವ ಪುರಾಣ, ಗುರುರಾಜ ಚರಿತ್ರೆ, ರಾಘವಾಂಕ ಚರಿತ್ರೆ ಇತ್ಯಾದಿ ಅನೇಕ ಗ್ರಂಥಗಳಲ್ಲಿ ಸೂಚ್ಯವಾಗಿಯೂ ಕೀರ್ತಿತನಾಗಿದ್ದಾನೆ ಎಂದು ಬಿ.ಎನ್.ಎಂ. ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಿರಾದಾರ ಅಭಿಪ್ರಾಯಪಟ್ಟರು.

ನಗರದ ರಾಧಾಕೃಷ್ಣನ್ ಬಡಾವಣೆಯಲ್ಲಿರುವ ಶಿವಬಸವ ಯೋಗಾಶ್ರಮದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ದೊಡ್ಡಣ್ಣ ಬಜಂತ್ರಿ ಮಾತನಾಡಿ, ಕಲ್ಯಾಣ ಪಟ್ಟಣದಲ್ಲಿ ನುಲಿಯ ಚಂದಯ್ಯ ಅರಣ್ಯದಿಂದ ಮೆದೆಹುಲ್ಲು, ಮರದತೊಗಟೆ ಮೊದಲಾದವನ್ನು ತಂದು ಅದರಿಂದ ಹಗ್ಗ ಕಣ್ಣಿಗಳನ್ನು ಮಾಡಿ ತಲೆಯ ಮೇಲೆ ಹೊತ್ತು ನಗರದಲ್ಲಿ ಮಾರಿದ ನಂತರ ಬಂದ ಕಾಯಕದ್ರವ್ಯದಿಂದ ಗುರುಲಿಂಗ ಜಂಗಮ ಸೇವಾಕಾರ್ಯವನ್ನು ಮಾಡಿಕೊಂಡು ಮಹಾಶರಣನೆನಿಸಿದ್ದನು ಎಂದು ನುಡಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎಸ್.ವಿ.ನಾಡಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಖೇಡ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಐ. ಮೇತ್ರಿ, ಕೊರಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾವ ವಾಜಂತ್ರಿ, ಪ್ರೊ.ಯು.ಎನ್. ಕುಂಟೋಜಿ, ಪ್ರೊ.ಶರಣಗೌಡ ಪಾಟೀಲ, ರವಿ ಜಾಧವ, ಮುಸ್ತಾಕ ಮಲಘಾಣ, ರಾಜೇಂದ್ರಕುಮಾರ ಬಿರಾದಾರ ಮತ್ತಿತರರಿದ್ದರು.