filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34; 
ಜಿಲ್ಲೆ

ಕಾಯಕ, ದಾಸೋಹದಿಂದ ನೆಮ್ಮದಿ

ಎಂ.ಎಸ್​.ಹಿರೇಮಠ ಬೆಳಗಾವಿ

ಯರಗಟ್ಟಿ: ಅಣ್ಣ ಬಸವಣ್ಣನವರು ಹೇಳಿದಂತೆ ಕಾಯಕ ಮತ್ತು ದಾಸೋಹ ತತ್ತ$್ವ ಪರಿಪಾಲನೆ ಮಾಡಿಕೊಂಡು, ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಮುನವಳ್ಳಿ ಸೋಮಶೇಖರ ಮಠದ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಮಹಾಂತ ದುರಡುಂಡೀಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ವಿಶೇಷ ಶಿವಾನುಭವಗೋಷ್ಠಿ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣವರ ವಚನ ಸಾಹಿತ್ಯವನ್ನು ಮಕ್ಕಳಿಗೆ ಕಲಿಸುವ ಮೂಲಕ ಉತ್ತಮ ಸಂಸ್ಕಾರ ನೀಡಬೇಕು ಎಂದರು.

ಹಿರಿಯರಾದ ಅಶೋಕ ಹಾದಿಮನಿ ಮಾತನಾಡಿ, ಈ ನಾಡಿನಲ್ಲಿ ಆಗಿ ಹೋದ ವೀರ ಮಹಿಳೆಯರಾದ ಕಿತ್ತೂರು ಚನ್ನಮ್ಮ, ಜಾನ್ಸಿರಾಣಿ ಲಕ್ಷಿ$್ಮಭಾಯಿ, ಬೆಳವಡಿ ಮಲ್ಲಮ್ಮ ಇನ್ನು ಅನೇಕ ಮಹಿಳೆಯರ ಸಾಹಸ ಮತ್ತು ಯಶೋಗಾತೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆ. ಇವರ ಸಾಧನೆ, ಹೋರಾಟವನ್ನು ಮಕ್ಕಳಿಗೆ ತಿಳಿಸಿ ಧೈರ್ಯ ಮತ್ತು ಸಾಹಸ ಪ್ರವತ್ತಿ ಬೆಳೆಸಬೇಕು ಎಂದರು.

ಕುಂದರಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮೊಬೆಲ್​ ಅತಿಯಾದ ಬಳಕೆಯಿಂದ ಮಕ್ಕಳು ಆರೋಗ್ಯದ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಪಾಲಕರು ಮೊದಲು ಮೊಬೆಲ್​ನಿಂದ ದೂರವಿರಬೇಕು ಎಂದರು.

ಶಿವಶಂಕರ ಪಟ್ಟೇದ ದಂಪತಿಗಳು ಶಿವಾನುಭವ ಸೇವೆ ಮಾಡಿದರು. ಶ್ರೀಶಕ್ತಿ ಮೇತ್ರಿ ಭರತನಾಟ್ಯ ಪ್ರದರ್ಶನ ಮಾಡಿದರು. ಮಹಾಂತ ದುರಡುಂಡೀಶ್ವರ ಮಠದ ಅಧ್ಯ ಮಹಾಂತೇಶ ಜಕಾತಿ, ಅಶೋಕ ಅಂಗಡಿ, ಬಸಲಿಂಗಪ್ಪ ಕತ್ತಿಶೆಟ್ಟಿ, ಸಹಾಯಕ ಕಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಬಸವರಾಜ ಪಟ್ಟೇದ, ಗಜಾನನ ಪಟ್ಟೇದ, ಈರಪ್ಪ ಹಾದಿಮನಿ, ಶ್ರೀಶೆಲ ವಾಲಿ, ಬಸವಣ್ಣೆಪ್ಪ ಬಳಿಗಾರ, ಶಂಕ್ರಯ್ಯ ಹಿರೇಮಠ, ಶಿವಾನಂದ ಪಟ್ಟಣಶೆಟ್ಟಿ, ಎನ್​.ಪಿ. ಜಮಕಿ, ಎಸ್​.ಎಂ ಯಾದವಾಡ, ಎಂ.ಎಂ. ಪಾಟೀಲ, ಬಿ.ಎಂ. ಪಾಟೀಲ, ಸಿ.ಎಸ್​. ಗುತ್ತಿಗೋಳಿ, ಸದಾನಂದ ಹಣಬರ, ವೀರಪ್ಪ ಹಾದಿಮನಿ ಇತರರು ಇದ್ದರು.