???????????????????????????????????? 
ಜಿಲ್ಲೆ

ಶರಣರಲ್ಲಿತ್ತು ಕಾಯಕ, ದಾಸೋಹ ಸಿದ್ಧಾಂತ

ಮಾನ್ವಿ: ನಾಡು, ನುಡಿ, ಸಂಸ್ಕೃತಿಗೆ ಶರಣರ, ಸಂತರ ಮತ್ತು ಮಹಾನ್ ಪುರುಷರು ಕೊಡುಗೆ ಅಪಾರವಾಗಿದೆ. ಮಹನೀಯರ ಆರ್ದಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ತಹಸೀಲ್ದಾರ್ ರಾಜು ಪಿರಂಗಿ ಹೇಳಿದರು.

ಪಟ್ಟಣದ ಟೌನ್‌ಹಾಲ್‌ನಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಮತ್ತು ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಶರಣರು ಕಾಯಕ, ದಾಸೋಹ ಸಿದ್ಧಾಂತಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ನಾರಾಯಣ ಗುರುಗಳು ಜಾತಿ-ಮತಗಳ ಭೇದ ಮಾಡದೆ ಎಲ್ಲರೂ ಒಂದೇ ಎನ್ನುವ ಮನೋಭಾವ ಹೊಂದಿದ್ದರು ಎಂದರು.