ಜಿಲ್ಲೆ

ಕಾಯಕ ನಿಷ್ಠೆಯಿಂದ ಯಶಸ್ಸು

ಪ್ರಶಾಂತ ಹೂಗಾರ

ಅಥಣಿ: ನಾವು ಮಾಡುವ ಕೆಲಸದಲ್ಲಿ ಶ್ರೇಷ್ಠ, ಕನಿಷ್ಠ ಎಂಬುದು ಇಲ್ಲ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ನಿಶ್ಚಿತ ಎಂದು ರಾಯಚೂರಿನ ರೈತ ಮಹಿಳೆ ಡಾ.ಕವಿತಾ ಮಿಶ್ರಾ ಹೇಳಿದರು.

ಪಟ್ಟಣದ ಶಿವಣಗಿ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇನ್ನರ್‌ವ್ಹೀಲ್ ರೋಟರಿ ಸಂಸ್ಥೆ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಒಂದು ಎಕರೆ ಜಮೀನಿನಲ್ಲಿ 1 ಕೋಟಿ ರೂ. ಉತ್ಪಾದಿಸುವ ಕಲೆಯನ್ನು ರೈತರು ರೂಢಿಸಿಕೊಳ್ಳಬೇಕು ಎಂದರು.

ಮೈಸೂರಿನ ವಾಗ್ಮಿ ಕೃಷ್ಣೇಗೌಡ ಮಾತನಾಡಿ, ಸೇವೆ ಮತ್ತು ತ್ಯಾಗ ಭಾರತದ ಆದರ್ಶವಾಗಿವೆ. ರೋಟರಿ ಸಂಸ್ಥೆ ಕೈಗೊಂಡ ನಿಸ್ವಾರ್ಥ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿದರು.

ಮೈಸೂರಿನ ಸುಮಾ ಮಾತನಾಡುವ ಗೊಂಬೆ ಹಾಗೂ ಮ್ಯಾಜಿಕ್ ಕಾರ್ಯಕ್ರಮ ನೀಡಿದರು. ಇನ್ನರ್‌ವ್ಹೀಲ್ ಸಂಸ್ಥೆಯ 25 ಮಹಿಳಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಪೂರ್ಣಿಮಾ ಪಾಂಗಿ, ತೃಪ್ತಿ ಕುಲಕರ್ಣಿ, ಮಧುಶ್ರೀ ಮಂಗಸೂಳಿ, ಅರುಣ ಸೌದಾಗರ, ಉದ್ಯಮಿ ರಾವಸಾಹೇಬ ಐಹೊಳೆ, ಮಹಾಂತೇಶ ಕೌಲಾಪುರೆ, ಸುಮೇದಾ ಮಿರಜ, ಲಲಿತಾ ಮೆಕನಮರಡಿ, ಸಚಿನ್ ದೇಸಾಯಿ, ವೈಶಾಲಿ ಮಠಪತಿ, ಶೇಖರ ಕೋಲಾರ, ಅರುಣ ಯಲಗುದ್ರಿ ಇತರರಿದ್ದರು.