ಬೀಳಗಿಯ ಬಸವ ವೃತ್ತದಲ್ಲಿ ಬಸವಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಸವೇಶ್ವರ ಮೂರ್ತಿಗೆ ಶಾಸಕ ಜೆ.ಟಿ. ಪಾಟೀಲ ಪುಷ್ಪ ನಮನ ಸಲ್ಲಿಸಿದರು. ತಾಪಂ ಇಒ ಶ್ರೀನಿವಾಸ ಪಾಟೀಲ, ಗ್ರೇಡ್ 2 ತಹಸೀಲ್ದಾರ್ ಆನಂದ ಕೋಲ್ಲಾರ, ವಿ.ಜಿ.ರೇವಡಿಗಾರ ಮತ್ತಿತರರಿದ್ದಾರೆ. 
ಜಿಲ್ಲೆ

ಕಾಯಕ ನಿಷ್ಠೆ ಬೋಧಿಸಿದ ಶರಣ

ವಿನಯ ಆಶೋಕ ನಾಯ್ಕ

ಬೀಳಗಿ: ಬಸವಣ್ಣನವರು ಜಾತಿ, ಲಿಂಗ, ಭಾಷೆಗಳ ಭೇದವಿಲ್ಲದೆ, ಶರಣ ತತ್ವ, ಸಮಾನತೆ, ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯಿಟ್ಟು ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ಥಳೀಯ ಬಸವ ವೃತ್ತದಲ್ಲಿ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಲೋಕಕ್ಕೆ ವಚನ ಸಾಹಿತ್ಯದ ಮೂಲಕ ಹೊಸ ಚಿಂತನೆ ನೀಡಿದ್ದರು. ಆದ್ದರಿಂದಲೇ ಬಸವಣ್ಣ ಮತ್ತು ಅವರ ಚಿಂತನೆಗಳು ಕಾಲಕಾಲಕ್ಕೆ ಪ್ರಸ್ತುತವಾಗುತ್ತದೆ. ಮಾನವ ಕುಲಕ್ಕೆ ಅವರ ಆದರ್ಶ ತತ್ವಗಳು ಮಾದರಿಯಾಗಿವೆ ಎಂದರು.

ಗ್ರೇಡ್-2 ತಹಸೀಲ್ದಾರ್ ಆನಂದ ಕೋಲ್ಲಾರ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ತಾಪಂ ಪರಭಾರಿ ಇಒ ಶ್ರೀನಿವಾಸ ಪಾಟೀಲ,ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಬಿಇಒ ಅರ್.ಎಸ್. ಆದಾಪೂರ, ಅಬಕಾರಿ ಅಧಿಕಾರಿ ಅನಿಲ ಹೂಗಾರ, ಗೋವಿಂದ ಅರಲಿಕಟ್ಟಿ, ಬಸವ ಬಳಗ ಸಮಿತಿ ಸದಸ್ಯರಾದ ವಿ.ಜಿ.ರೇವಡಿಗಾರ, ಶಿವಾನಂದ ಸಾರಾವರಿ, ಮಾಜಿ ಪಪಂ ಅಧ್ಯಕ್ಷ ಅನಿಲ ಗಚ್ಚಿನಮನಿ, ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಮಹಾದೇವ ಹಾದಿಮನಿ, ಸಿದ್ದಪ್ಪ ಮೇಟಿ, ಸಂಗಪ್ಪ ಕಂದಗಲ್ಲ, ಪಪಂ ಸದಸ್ಯ ರಾಜು ಬೋರ್ಜಿ, ಬಸವರಾಜ ಹಳ್ಳದಮನಿ, ಕಂದಾಯ ಇಲಾಖೆ ಶಿರಸ್ತೇದಾರ ಮಂಜುನಾಥ ಧರೆಗೊಂಡ ಮತ್ತಿತರರಿದ್ದರು.