ಜಿಲ್ಲೆ

ಕನ್ನಡ ಮಾತಾಡುವವರ ಸಂಖ್ಯೆ ಕ್ಷೀಣ: ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ಬೇಸರ

reportermys

ಮಂಡ್ಯ: ಕನ್ನಡಿಗರಾದ ನಾವು ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ ವಿಷಾದಿಸಿದರು.

ನಗರದ ಕರ್ನಾಟಕ ಸಂದ ಕೆ.ವಿ.ಶಂಕರಗೌಡ ಶತವಾನೋತ್ಸವ ಭವನದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಹಬ್ಬ, ರಾಜ್ಯ ಮಟ್ಟದ 30ನೇ ಕವಿಕಾವ್ಯ ಮೇಳ, ಕನ್ನಡ ರತ್ನ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ಮಾತನಾಡಿದರು. ಕೇರಳದಲ್ಲಿ ಶೇ.92ರಷ್ಟು ಮಲಯಾಳಿ ವಾತನಾಡುವವರಿದ್ದಾರೆ. ತಮಿಳುನಾಡಿನಲ್ಲಿ ಶೇ.62ರಷ್ಟು, ಆಂಧ್ರ, ತೆಲಂಗಾಣದಲ್ಲಿ ಶೇ.72ರಷ್ಟು ತೆಲುಗು ವಾತನಾಡುವವರಿದ್ದಾರೆ. ಆದರೆ, ಕರ್ನಾಟಕದಲ್ಲಿ ವಾತ್ರ ಕನ್ನಡ ವಾತನಾಡುವವರ ಸಂಖ್ಯೆ ಕೇವಲ ಶೇ.39ರಷ್ಟಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ವಾತನಾಡುವವರ ಸಂಖ್ಯೆ ಕೇವಲ ಶೇ.25ರಷ್ಟು ಇಲ್ಲ. ಇನ್ನು ರಾಜ್ಯದ ಗಡಿ ಭಾಗದಲ್ಲಿ ಪಕ್ಕದ ಭಾಷಿಕರು ಹೆಚ್ಚಾಗಿರುವುದರಿಂದ ಕನ್ನಡ ವಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೀಗೆ ಮುಂದುವರಿದರೆ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವವರ‌್ಯಾರು ಎಂದು ಪ್ರಶ್ನಿಸಿದರು.

ಕನ್ನಡ ಉಳಿಸಲು ಅಭಿಯಾನ ವಾಡುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಕನ್ನಡ ಶಿಕ್ಷಕರಿಗೆ ಕೇವಲ 10ರಿಂದ 15 ಸಾವಿರ ರೂ. ವೇತನವಾದರೆ, ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಸರ್ಕಾರಿ ಇಂಜಿನಿಯರ್‌ಗಳಿಗೆ ಕನಿಷ್ಠ 50 ಸಾವಿರ ರೂ.ವೇತನ ಇದೆ. ಹೀಗಿರುವಾಗ ಕನ್ನಡ ಬೆಳೆಯಲು ಹೇಗೆ ಸಾಧ್ಯ ಎಂದರು.

ಪತ್ರಕರ್ತ ಬದ್ರುದ್ದೀನ್ ಕೆ.ವಾಣಿ ಮಾತನಾಡಿ, ಕರುನಾಡಿನಲ್ಲಿ ಪ್ರತಿಯೊಬ್ಬ ಕನ್ನಡಿಗ ವಾತೃಭಾಷೆಗೆ ಒತ್ತು ಕೊಡದಿದ್ದರೆ ಕನ್ನಡ ಬೆಳವಣಿಗೆಗೆ ಕುತ್ತು ಬರಲಿದೆ ಎಂದರು.

ಕರ್ನಾಟಕ ಸಂದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕವಿಕಾವ್ಯ ಮೇಳದ ಸಮ್ಮೇಳನಾಧ್ಯಕ್ಷೆ ಬಿ.ಆರ್.ಉವಾ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ತಾಪಂ ವಾಜಿ ಸದಸ್ಯ ಸಂತೋಷ್ ಅರಕೆರೆ, ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಂದಗಾಲು, ಶಿಕ್ಷಕ ಮಂಗಲ ಶಿವಣ್ಣ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

ಇದೇ ಸಂದರ್ಭ ವಿವಿಧ ಕ್ಷೇತ್ರದ 30 ಸಾಧಕರಿಗೆ ರಾಜ್ಯ ಮಟ್ಟದ ಕನ್ನಡರತ್ನ ಪ್ರಶಸ್ತಿ ಹಾಗೂ ಐದು ಜನರಿಗೆ ನಾಗರಿಕ ಅಭಿನಂದನೆ ಸಲ್ಲಿಸಲಾಯಿತು. ಇನ್ನು 15 ಜನ ಕವಿಗಳಿಗೆ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ವಾಡಲಾಯಿತು.