ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಆನಂದರಾವ ನಾಯ್ಕ, ಮಹಾದೇವ ಸೂರಣ್ಣವರ, ಹನುಮಂತ ಗೋಡಿಗೌಡರ, ಎ.ಎಚ್.ಒಂಟಗೋಡಿ, ಸತ್ಯಪ್ಪ ಗೋಡಿಗೌಡರ, ಅಲ್ಲಪ್ಪ ಗೋಡಿಗೌಡರ, ನಾಗಪ್ಪ ಗೋಡಿಗೌಡರ, ಸಿದ್ದನಗೌಡ ಗೋಡಿಗೌಡರ ಇದ್ದರು. 
ಜಿಲ್ಲೆ

ಕಾಯಕದಿಂದ ಸಾರ್ಥಕತೆ ಪಡೆಯಿರಿ

ಮೂಡಲಗಿ: ಮನುಷ್ಯನ ಬದುಕಿನ ಎಲ್ಲ ಚಟುವಟಿಕೆಗಳಿಗೆ ದೇಹ ಮೂಲವಾಗಿದೆ. ದೇವಾಲಯಕ್ಕಿಂತ ದೇಹವೇ ಶ್ರೇಷ್ಠ ಎಂದು ಬಸವಣ್ಣನವರು ಪ್ರತಿಪಾದಿಸಿದ್ದರು ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಸಮೀಪದ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿರುವ ಮನೆ-ಮನೆಗೆ ಅರುಹಿನ ಅರಮನೆ ಪ್ರವಚನ, ಕೋವಿಡ್-19 ಅರಿವು ಅಭಿಯಾನದಲ್ಲಿ ಸತ್ಯಪ್ಪ ಭೀಮಪ್ಪ ಗೋಡಿಗೌಡರ ಕುಟುಂಬದ ಆತಿಥ್ಯದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣ ಲಕ್ಷ್ಮಣ ದೇವರು, ಅಕ್ಕನ ವಚನ ಕುರಿತು ಮಾತನಾಡಿ, ತನ್ನನ್ನು ತಾನು ಅರಿಯಬೇಕಾದರೆ ಗುರುವಿನ ಸತ್ಸಂಗ ಮತ್ತು ಮಾರ್ಗದರ್ಶನ ಅತೀ ಅಗತ್ಯವಾಗಿರುತ್ತದೆ ಎಂದರು. ಆನಂದರಾವ ನಾಯ್ಕ, ಮಹಾದೇವ ಸೂರಣ್ಣವರ, ಹನುಮಂತ ಗೋಡಿಗೌಡರ, ಎ.ಎಚ್.ಒಂಟಗೋಡಿ ಮಾತನಾಡಿದರು. ಸತ್ಯಪ್ಪ ಗೋಡಿಗೌಡರ, ಅಲ್ಲಪ್ಪ ಗೋಡಿಗೌಡರ, ನಾಗಪ್ಪ ಗೋಡಿಗೌಡರ, ಸಿದ್ದನಗೌಡ ಗೋಡಿಗೌಡರ, ಕಾರ್ತಿಕಶಾಸ್ತ್ರಿ, ವೀರಯ್ಯ ಶಾಸ್ತ್ರಿ, ಐಶ್ವರ್ಯಾ ಹನುಮಂತ ತಳವಾರ, ಡಾ.ಕೆ.ಎಚ್.ನಾಗರಾಳ ಮತ್ತಿತರರು ಉಪಸ್ಥಿತರಿದ್ದರು.