ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ ಜ.14ರಿಂದ 18ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಜ.14ರಂದು ಬೆಳಗ್ಗೆ ಪುಣ್ಯಾಹ ವಾಚನ, ಗಣಹೋಮ, ನವಕ ಪ್ರಧಾನ, ರುದ್ರಾಭಿಷೇಕ, ಮಹಾಪೂಜೆ, 12 ಗಂಟೆಗೆ ಬಲಿ ಹೊರಟು ಧ್ವಜಾರೋಹಣ, ಸಂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಾತ್ರಿ ಬಲಿ ಹೊರಟು ಉತ್ಸವ, ರಾತ್ರಿ ಪೂಜೆ, ಭೂತ ಬಲಿ, ದೀಪದ ಬಲಿ ನಡೆಯಲಿದೆ.
15ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 4 ಗಂಟೆಗೆ ಬಯನ ಬಲಿ ಉತ್ಸವ, ಮೂಡು ಸವಾರಿ, 16ರಂದು ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಸಂಜೆ 5ಕ್ಕೆ ಬಯನ ಬಲಿ, ಪಡು ಸವಾರಿ, 17ರಂದು ಬೆಳಗ್ಗೆ 7ರಿಂದ 10.30ರ ತನಕ ರುದ್ರಾಭಿಷೇಕ, 10.30ಕ್ಕೆ ರಥ ಕಲಶ, ಮಧ್ಯಾಹ್ನ 11ಕ್ಕೆ ಮಹಾಪೂಜೆ, ರಥಾರೋಹಣ, 12.30ಕ್ಕೆ ಪಲ್ಲಪೂಜೆ, 1ರಿಂದ 4 ರ ತನಕ ಮಹಾ ಸಂತರ್ಪಣೆ, ರಾತ್ರಿ 7 ಗಂಟೆಗೆ ಬ್ರಹ್ಮರಥೋತ್ಸವ ಮತ್ತು ಉತ್ಸವ, ಶ್ರೀಭೂತಬಲಿ, ಶಯನ ಕವಾಟ ಬಂಧನ ನಡೆಯಲಿದೆ.
18ರಂದು ಬೆಳಗ್ಗೆ 6ಕ್ಕೆ ಕವಾಟೋದ್ಘಾಟನೆ, ಅಭಿಷೇಕ, 8ರಿಂದ ತುಲಾಭಾರ ಸೇವೆ, 9ರಿಂದ 11.30 ರುದ್ರಾಭಿಷೇಕ, 12.30ಕ್ಕೆ ಮಹಾಪೂಜೆ, ಸಂಜೆ 6ಕ್ಕೆ ಮರುಳು ಧೂಮಾವತಿ ಭಂಡಾರ ಬರಲಿದೆ. ರಾತ್ರಿ 10ಕ್ಕೆ ಮರುಳು ಧೂಮಾವತಿ ಗಗ್ಗರ ಸೇವೆ, 11ಕ್ಕೆ ಬಲಿ ಹೊರಟು ಉತ್ಸವ, ಓಕುಳಿ, ರಥಾರೋಹಣ, ಕಟ್ಟೆ ಪೂಜೆ, ಅವಭೃತ ಅಗ್ನಿಕೇಳಿ, ದೈವದ ಭೇಟಿ, ಧ್ವಜಾವರೋಹಣ, ದೈವಗಳ ನೇಮ ನಡೆಯಲಿದೆ. 20ರಂದು ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.