ಜಿಲ್ಲೆ

ಕವಿವಾಣಿ ಸಾಹಿತ್ಯ ರತ್ನ ಪ್ರಶಸ್ತಿ ಪ್ರಕಟ

Uttara Kannada - Subash Hegde

ಶಿರಸಿ:ಕವಿವಾಣಿ ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಘಟಕದ ವತಿಯಿಂದ ನೀಡುವ 'ಕವಿವಾಣಿ ಸಾಹಿತ್ಯ ರತ್ನ' ಪ್ರಶಸ್ತಿ ಯು ಶಿರಸಿಯ ಉದಯೋನ್ಮುಖ ಕವಯಿತ್ರಿಯರಾದ ರಾಜಲಕ್ಷ್ಮಿ ಭಟ್ಟ ಹಾಗೂ ಯಶಸ್ವಿನಿ ಶ್ರೀಧರ ಮೂರ್ತಿ ಅವರಿಗೆ ಲಭಿಸಿದೆ.
ಕಾವ್ಯ ಗಾಯನ ಹಾಗೂ ಭಜನಾ ವಿಭಾಗದಲ್ಲಿ ರಾಜಲಕ್ಷ್ಮಿ ಭಟ್ಟ ಬೊಮ್ನಳ್ಳಿ ಹಾಗೂ ಸಾಹಿತ್ಯ ಹಾಗೂ ಕಲೆ ವಿಭಾಗದಲ್ಲಿ ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯ ಶಿಕ್ಷಕಿ, ಕವಯಿತ್ರಿ ಯಶಸ್ವಿನಿ ಶ್ರೀಧರ ಮೂರ್ತಿ ಅವರಿಗೆ ರಾಜ್ಯ ಮಟ್ಟದ ಕವಿವಾಣಿ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ ಎಂದು ಕವಿವಾಣಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಎನ್. ಅಕ್ರಂ ಪಾಷರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.