1)ಯಕ್ಲಾಸಪುರ ಗ್ರಾಮದ ಸ.ಕಿ.ಪ್ರಾಥಮಿಕ ಶಾಲೆ ಹೊರನೋಟ. 2) ಯಕ್ಲಾಸಪುರ ಸರ್ಕಾರಿ ಕಿ,ಪ್ರಾ.ಶಾಲೆ ಕಟ್ಟಡಗಳ ಛಾವಣಿ ಸಿಮೆಂಟ್ ಕಳಚಿ ರಾಡ್‌ಗಳು ಕಾಣಿ ಸುತ್ತಿರುವುದು. 
ಜಿಲ್ಲೆ

ಯಕ್ಲಾಸಪುರ ಸರ್ಕಾರಿ ಶಾಲೆ ಕೋಣೆಗಳು ಶಿಥಿಲ

ಕವಿತಾಳ: ವಟಗಲ್ ಗಾಪಂ ವ್ಯಾಪ್ತಿಯ ಯಕ್ಲಾಸಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು-ಶಿಕ್ಷಕರು ಜೀವಭಯದಲ್ಲಿ ಪಾಠ ಪ್ರವಚನ ನಡೆಸುವಂತಾಗಿದೆ.

ಒಂದರಿಂದ 5ನೇ ತರಗತಿ ನಡೆಸಲಾಗುತ್ತಿದ್ದು, ಇರುವ ನಾಲ್ಕು ಕೊಠಡಿಗಳ ಪೈಕಿ ಎರಡು ಪೂರ್ತಿ ಶಿಥಿಲಗೊಂಡಿದ್ದು, ಉಳಿದ ಎರಡು ಕೊಠಡಿಯಲ್ಲಿ ಶಿಕ್ಷಣ ನಡೆಸಲಾಗುತ್ತಿದೆ. 76 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಬ್ಬರು ಕಾಯಂ ಶಿಕ್ಷಕರಿದ್ದು, ಒಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಯೂಟ ಕೊಠಡಿಯಿಲ್ಲದೆ ಬಯಲಿನಲ್ಲಿಯೇ ಅಡುಗೆ ಮಾಡಲಾಗುತ್ತಿದೆ. ಸಂಬಂದಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಅನಾಹುತ ನಡೆಯುವ ಮೊದಲೇ ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ ಹೊಸದಾಗಿ ನಿರ್ಮಿಸಿಕೊಡಬೇಕು. ಶೌಚಗೃಹ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಪಂ ಸದಸ್ಯ ಶಿವಣ್ಣ, ಎಸ್ಡಿಎಂಸಿ ಅಧ್ಯಕ್ಷ ಹುಸೇನಪ್ಪ, ಗರುಡನಾಯಕ, ಪ್ರಭು, ದೇವರಾಜ, ಲಕ್ಷ್ಮಣ ಹಾಗೂ ಇತರರು ಒತ್ತಾಯಿಸಿದ್ದ್ದಾರೆ.

ಯಕ್ಲಾಸಪುರ ಸರ್ಕಾರಿ ಶಾಲೆಯಲ್ಲಿ ಶಿಥಿಲ ಕೊಠಡಿಗಳ ಕುರಿತು ಗಮನಕ್ಕಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ತಾತ್ಕಾಲಿಕವಾಗಿ ಮಕ್ಕಳಿಗೆ ಬೇರೆ ಕಡೆ ಪಾಠ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. | ಸೌಮ್ಯಾ ಸಿಆರ್‌ಪಿ, ಕವಿತಾಳ