ಚಿಂಚರಕಿ ಸ.ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಯಿತು. ಪಿಡಿಒ ಸಹರಾ ಬೇಗಂ, ಮುಖ್ಯ ಶಿಕ್ಷಕಿ ಜುಬೇದಾ ಬೇಗಂ, ಕ್ರೈ ಸಂಸ್ಥೆಯ ತಾಲೂಕಾಧಿಕಾರಿ ಶೋಭಾ, ಶಶಿಕಲಾ, ಗ್ರಾಪಂ ಸಿಬ್ಬಂದಿ ದುರುಗಣ್ಣ, ಗೋವಿಂದ, ಅಮರೇಶ, ಮೌನೇಶ, ಶಿಕ್ಷಕರಾದ ಗೌರಮ್ಮ, ಆಂಜನೇಯ ಇತರರಿದ್ದರು. 
ಜಿಲ್ಲೆ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಹಕಾರ ಅಗತ್ಯ

ಕವಿತಾಳ: ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಪಿಡಿಒ ಸಹರಾ ಬೇಗಂ ಹೇಳಿದರು.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಸಮೀಪದ ಚಿಂಚರಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂನಿಂದ ಗುರುವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿಯನ್ನು ನಿವಾರಣೆ ಮಾಡಬೇಕೆಂದು ಸರ್ಕಾರ ಆದೇಶಿಸಿದೆ. ಕೂಲಿ ಕೆಲಸಕ್ಕೆ ಕಳುಹಿಸುವುದು ಹಾಗೂ ಅಂಗಡಿಗಳಲ್ಲಿ ಹೋಟೆಲ್‌ಗಳಲ್ಲಿ, ಗ್ಯಾರೇಜ್‌ನಲ್ಲಿ ಮಕ್ಕಳನ್ನು ದುಡಿಸಿಕೊಂಡರೆ ಅಪರಾಧ.  ಪಾಲಕರು ಮಕ್ಕಳನ್ನು ಕೂಲಿಗೆ ಕಳುಹಿಸದೆ ಶಾಲೆಗೆ ಕಳುಹಿಸಬೇಕು ಎಂದರು.