ಕವಿತಾಳ: ಪರಿಸರದಿಂದಲೇ ಜೀವನ. ಜೀವ ಸಂಕುಲ ಉಳಿವಿಗಾಗಿ ಪ್ರಕೃತಿ ಸಂಪತ್ತು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಸುರೇಶ ಬಾಬು ಹೇಳಿದರು.
ಕಡ್ಡೋಣಿಯ ಸಸ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಅರಣ್ಯ ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪರಿಸರ ನಾಶದಿಂದ ಜೀವ ಸಂಕುಲಕ್ಕೆ ಹಾನಿಯಾಗಲಿದೆ. ಇದನ್ನು ತಪ್ಪಿಸುವ ಸಲುವಾಗಿ ಪ್ರತಿಯೊಬ್ಬರೂ ಮನೆಗೊಂದು ಗಿಡ ಬೆಳೆಸಬೇಕು. ರೈತರು ಹೊಲಗಳ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡಬೇಕು. ಈ ಭಾಗದಲ್ಲಿ ತಾಪಮಾನ ಹೆಚ್ಚಿದ್ದು, ಹಸಿರು ಹೆಚ್ಚಿಸುವ ಅಗತ್ಯವಿದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಉಮಾಕಾಂತ, ಸಾಮಾಜಿಕ ಉಪ ವಲಯ ಅರಣ್ಯಧಿಕಾರಿ ರಮೇಶ ಬಡಿಗೇರ, ಗ್ರಾಪಂ ಉಪಾಧ್ಯಕ್ಷ ಮಹಿಬೂಬ್‌ಸಾಬ್, ಪ್ರಮುಖರಾದ ಈರಣ್ಣಗೌಡ, ಕುಮಾರಪ್ಪ, ಅಮರೇಶ ಸಹುಕಾರ, ಎನ್.ಶರಣಪ್ಪ, ದುರುಗಪ್ಪ, ರಮೇಶ ನಾಯಕ, ಅಮರಪ್ಪ ಪಾತಪುರ, ಅರಣ್ಯ ರಕ್ಷಕ ಸಲೀಂಪಾಷಾ, ಅರಣ್ಯ ಪ್ರೇರಕರಾದ ಅಮರಯ್ಯಸ್ವಾಮಿ, ಬಸವರಾಜ ಕಲ್ಲೂರು ಇತರರಿದ್ದರು.