ಕವಿತಾಳ: ಸಮೀಪದ ವಟಗಲ್‌ನ ಜಾಲಿಗುಡ್ಡದ ಹತ್ತಿರದ ಶಿವಪುರದ ತಿಂಥಣಿ ಮೌನೇಶ್ವರ ದೇವರ ಎಂಟನೆಯ ವರ್ಷದ ಜಾತ್ರಾಮಹೋತ್ಸವ ಮತ್ತು ಸಂತ ಅಬ್ದುಲ್ ತಾತನವರ 12ನೇ ತುಲಾಭಾರ ಮತ್ತು ದೀಪೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ವಟಗಲ್ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಮೌನೇಶ್ವರ ದೇವಸ್ಥಾನದ ವರೆಗೆ ಕಳಸ ಕುಂಬ, ಡೊಳ್ಳು ಕುಣಿತ ಮುಖಾಂತರ ಮೌನೇಶ್ವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮೌನೇಶ್ವರ ದೇವರ ದೇವಸ್ಥಾನಕ್ಕೆ ಕಳಸಾ ರೋಹಣವನ್ನು ಸಂತ ಅಬ್ದುಲ್ ತಾತಾ ನೆರವೇರಿಸಿದರು. ದೋತರಬಂಡಿಯ ಮೈಮೂದ್ ಹೈದರಾಲಿಸಾಬ್ ಅವರಿಂದ ಅಬ್ದುಲ್ ತಾತನವರ 12ನೇ ತುಲಾಭಾರ ನಡೆಯಿತು.
ನಂತರ ಆಯೋಜಸಿದ್ದ ಧರ್ಮ ಸಭೆಯಲ್ಲಿ ದೇವಸ್ಥಾನದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ,ಸಂತ ಅಬ್ದುಲ್ ತಾತನವರು ಮುಸ್ಲಿಂರಾದರೂ ಸಂತನಾಗಿ ಮೌನೇಶ್ವರ ದೇವರನ್ನು ತನ್ನ ಆರಾಧ್ಯ ದೈವವಾಗಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಆಯೋಜಿಸುತ್ತಿದ್ದರು ಎಂದರು.