ಜಿಲ್ಲೆ

ಕವಿತಾಳ ಪ್ರಾಕೃಪಸ ಸಂಘಕ್ಕೆ ಯಮನಪ್ಪ ಅಧ್ಯಕ್ಷ

ಕವಿತಾಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯಮನಪ್ಪ ದಿನ್ನಿ ಹಾಗೂ ಉಪಾಧ್ಯಕ್ಷರಾಗಿ ಸಾಂತಪ್ಪ ಒಂದು ಮತದ ಅಂತರದಿಂದ ಗುರುವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಯಮನಪ್ಪ ದಿನ್ನಿ ಮತ್ತು ಶೇಖರಪ್ಪ ಹಟ್ಟಿ ನಾಮಪತ್ರವನ್ನು ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಪ್ಪ ಚಿಂಚರಕಿ ಮತ್ತು ಇಂದರ ಪಾಷಾ ಚಿಂಚರಕಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ 13 ಮತಗಳು ಚಲಾವಣೆಯಾದವು.

ಯಮನಪ್ಪ ದಿನ್ನಿ 7 ಮತ ಮತ್ತು ಶೇಖರಪ್ಪ ಹಟ್ಟಿ 6 ಮತ ಲಭಿಸಿದವು. ಉಪಾಧ್ಯಕ್ಷ ಸ್ಥಾನದ ಶಾಂತಪ್ಪ 7 ಮತ, ಇಂದರ ಪಾಷಾ ಚಿಂಚರಕಿ 6 ಮತ ಪಡೆದರು ಎಂದು ಚುನಾವಣಾಧಿಕಾರಿ ಪ್ರದೀಪ್ ತಿಳಿಸಿದರು.