ಪಾಮನಕಲ್ಲೂರಿನಲ್ಲಿ ಜೆಸ್ಕಾಂ ಶಾಖೆಯ ಜೆಇ ಬನ್ನಪ್ಪಗೆ ರೈತರು ಮನವಿ ಸಲ್ಲಿಸಿದರು. ಪ್ರಮುಖರಾದ ಅಮರಪ್ಪ ಕಲ್ಲೂರು, ಹನುಮಂತ ನಾಯಕ, ಮರೆಯಪ್ಪ, ಭೀಮಶೇಪ್ಪ ಇಳಿಗೇರ, ಭೀರಪ್ಪ, ಆದಯ್ಯ, ಕಿಟ್ಟಪ್ಪ , ಚಂದಪ್ಪ ಇತರರಿದ್ದರು. 
ಜಿಲ್ಲೆ

ವಿದ್ಯುತ್ ಪರಿವರ್ತಕ ಅಳವಡಿಸಿ

ಕವಿತಾಳ: ವಿದ್ಯುತ್ ಪರಿವರ್ತಕ ಮಂಜೂರು ಮಾಡಲು ಒತ್ತಾಯಿಸಿ ರೈತರು ಕವಿತಾಳ ಸಮೀಪದ ಪಾಮನಕಲ್ಲೂರಿನಲ್ಲಿ ಜೆಸ್ಕಾಂ ಶಾಖೆಯ ವ್ಯವಸ್ಥಾಪಕ ಜೆಇ ಬನ್ನಪ್ಪಗೆ ಶನಿವಾರ ಮನವಿ ಸಲ್ಲಿಸಿದರು.

ಪಾಮನಕಲ್ಲೂರಿನಲ್ಲಿ ಕಡಿಮೆ ವೊಲ್ಟೇಜ್‌ನಿಂದ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರೈತರಿಗೆ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. 10ಕ್ಕೂ ಹೆಚ್ಚು ಮೋಟರ್‌ಗಳಿಗೆ ವೊಲ್ಟೇಜ್ ಸಮಸ್ಯೆ ಎದುರಾಗಿದೆ. ಕೂಡಲೇ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕು ಎಂದು ರೈತ ಮರೆಯಪ್ಪ ನಾಯಕ ಒತ್ತಾಯಿಸಿದರು.

ರೈತರಾದ ಅಮರಪ್ಪ ಕಲ್ಲೂರು, ಹನುಮಂತ ನಾಯಕ, ಮರೆಯಪ್ಪ, ಭೀಮಶೇಪ್ಪ ಇಳಿಗೇರ, ಬೀರಪ್ಪ, ಆದಯ್ಯ, ಕಿಟ್ಟಪ್ಪ , ಚಂದಪ್ಪ, ಬಳಗನೂರು ಶಾಖೆಯ ವ್ಯವಸ್ಥಾಪಕ ರಾಜಶೇಖರ, ಹಾಲಪೂರ ಶಾಖೆಯ ವ್ಯವಸ್ಥಾಪಕ ಮರಿದೇವ ಇತರರಿದ್ದರು.