ಕವಿತಾಳ ಸಮೀಪದ ತುಪ್ಪದೂರಿನಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ಬಿಇಒ ಚಂದ್ರಶೇಖರ ದೊಡ್ಡಮನಿಗೆ ಸನ್ಮಾನಿಸಲಾಯಿತು.  
ಜಿಲ್ಲೆ

ಪ್ರತಿಭೆಗಳನ್ನು ಗುರುತಿಸುವುದು ಕರ್ತವ್ಯ

ಕವಿತಾಳ: ಅಗಾಧ ಪ್ರತಿಭೆಗಳನ್ನು ಹೊಂದಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಹೇಳಿದರು.

ತುಪ್ಪದೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾಮನಕಲ್ಲೂರು ಸಿಆರ್‌ಸಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಹೊಂದಬೇಕು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಾಜಕ್ಕೆ ತಿಳಿಸಬೇಕು ಎಂದರು.

ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ, ರುದ್ರಪ್ಪ ಹಾಗೂ ವರ್ಗಾವಣೆ ಹೊಂದಿದ ಹನುಮಂತ ದನ್ನೂರು, ಶಶಿಧರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಭರತ ನಾಟ್ಯ, ಜಾನಪದ ನೃತ್ಯ, ಕವ್ವಾಲಿ, ಹಾಸ್ಯ, ಮಿಮಿಕ್ರಿ, ಜಾನಪದ ಗೀತೆ, ಭಾವಗೀತೆ, ಛದ್ಮವೇಶ, ಅಭಿನಯ ಗೀತೆ ಪ್ರಸ್ತುತಪಡಿಸಲಾಯಿತು.

ಗ್ರಾಪಂ ಅಧ್ಯಕ್ಷ ರಾಜಸಾಬ್ ಸೈಕಲ್ ಪಾಮನಕಲ್ಲೂರು, ಅಮೀನಗಡ ಗ್ರಾಪಂ ಅಧ್ಯಕ್ಷ ಮೌನೇಶ ದೊಡ್ಡಮನಿ, ನೌಕರರ ಸಂಘದ ಅಧ್ಯಕ್ಷ ಶಂಕರಗೌಡ , ಪ್ರಮುಖರಾದ ಬಾಲಸ್ವಾಮಿ ಹಂಪನಾಳ, ಪಂಪಾಪತಿ ಹೂಗಾರ, ಶರಣಪ್ಪ ರೂಡಗಿ, ಚನ್ನವೀರ ಜೋತನ್, ಬಸವರಾಜಪ್ಪ, ಮಾಲತೇಶ, ಅಮರಗುಂಡಪ್ಪ, ಸುಭಾಷ್‌ಚಂದ್ರ, ವೀರಾರಡ್ಡೆಪ್ಪ, ಮಂಜುನಾಥ ಹಾಲಪೂರ, ಮಹಾಂತೇಶ, ಸಂಗಪ್ಪ, ಸುಮಾಂತ, ಶಶಿಧರ ಜಂಗಮರಹಳ್ಳಿ, ಬೀರಪ್ಪ ಶಿವಣ್ಣ, ಸಿಆರ್‌ಪಿಗಳಾದ ಸೋಮು, ಪ್ರಶಾಂತಗೌಡ, ಸತ್ಯವಾದಿ, ಮುಖ್ಯ ಶಿಕ್ಷಕರಾದ ಮಾರ್ಟಿನ್ ಅಮಲ್‌ರಾಜ, ಶಾಂತಾ ಮೇಟಿ ಇದ್ದರು.