ಬಾಗಲವಾಡದ ರಸ್ತೆಯಲ್ಲಿ ಸಿಲುಕಿರುವ ಲಾರಿಯನ್ನು ಜೆಸಿಬಿ ಸಹಾಯದ ಹೊರ ತರುತ್ತಿರುವುದು. 
ಜಿಲ್ಲೆ

ಬಾಗಲವಾಡದಲ್ಲಿ ಕಾಮಗಾರಿ ವಿಳಂಬದಿಂದ ಸಮಸ್ಯೆ

ಶ್ರೀನಾಥ

ಕವಿತಾಳ: ಸಮೀಪದ ಬಾಗಲವಾಡದಲ್ಲಿ ಮಾನ್ವಿ-ಕವಿತಾಳ ಮುಖ್ಯ ರಸ್ತೆ ಕಾಮಗಾರಿ ವಿಳಂಬದಿಂದ ಮಳೆ ಬಂದಾಗ ವಾಹನಗಳು ಕೆಸರಿನಲ್ಲಿ ಸಿಲುಕಿ ವಾಹನ ಸವಾರರು ಪರದಾಡುವಂತಾಗಿದೆ.

ಕೆಲ ತಿಂಗಳ ಹಿಂದೆ ಸಚಿವ, ಶಾಸಕರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಕಾಮಗಾರಿ ವಿಳಂಬ ನೀತಿಯಿಂದ ವಾಹನ ಸವಾರರು ರೋಸಿ ಹೋಗಿದ್ದಾರೆ. ಅದರಲ್ಲೂ ಮಳೆ ಬಂದಾಗ ರಸ್ತೆ ಕೆಸರು ಗದ್ದೆಯಂತಾಗುತ್ತಿದೆ.

ಆದ್ದರಿಂದ ಆದಷ್ಟು ಬೇಗ ರಸ್ತೆ ಕಾಮಗಾರಿಯನ್ನು ಮುಗಿಸಬೇಕು ಎಂದು ಪ್ರಮುಖರಾದ ನಾಗರಾಜ ಹಿಂದಿನ ಮನೆ, ಅಮರೇಶ ದೇಸಾಯಿ, ಬಾಷಸಾಬ್, ಹುಸೇನಪ್ಪ ಒತ್ತಾಯಿಸಿದ್ದಾರೆ.