ಕವಿತಾಳದಲ್ಲಿ ಕಲ್ಮಠದ ಸಿದ್ಧಲಿಂಗ ಶ್ರೀಗಳನ್ನು ಆರೋಗ್ಯ ಇಲಾಖೆಯಿಂದ ಸನ್ಮಾನಿಸಲಾಯಿತು. ಟಿಎಚ್‌ಒ ಡಾ.ಶರಣಬಸವ, ವೈದ್ಯರಾದ ಶ್ರೀಧರ, ಸುರೇಶ ಹೊನ್ನಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಆರೋಗ್ಯ ನಿರೀಕ್ಷಣಾಧಿಕಾರಿ ಮಹಾಂತೇಶ ಇತರರಿದ್ದರು. 
ಜಿಲ್ಲೆ

ಜನಪರ ಕಾಳಜಿ ಹೊಂದಿರುವ ಮಠ

ಕವಿತಾಳ: ಪಟ್ಟಣದ ಕಲ್ಮಠದಲ್ಲಿ ಬುಧವಾರ ಮಠದ ಸಿದ್ಧಲಿಂಗ ಸ್ವಾಮೀಜಿಗಳ 35ನೇ ವರ್ಷದ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮಾನ್ವಿ ಟಿಎಚ್‌ಒ ಡಾ.ಶರಣಬಸವ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ನಡೆಸುತ್ತಿರುವುದು ಮಠದ ಜನಪರವಾದ ಕಾಳಜಿಯಾಗಿದೆ ಎಂದರು.

ಪ್ರಮುಖರಾದ ಶೇಖರಪ್ಪ ಹಟ್ಟಿ, ಎಂ.ಹೂಗಾರ, ಅಮರೇಶ ದಿನ್ನಿ, ರಾಜಶೇಖರ ಗೌಡ, ಸೂಗರಡ್ಡಿ ಶಾವಂತಗೇರ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಶರಣಪ್ಪ ಹಣಗಿ, ಸಂಗಯ್ಯಸ್ವಾಮಿ, ಪ್ರದೀಪಕುಮಾರ, ಅಜರುದ್ದಿನ್ ಇತರರಿದ್ದರು.