ಕಾರ್ಯಕ್ರಮ ಕುರಿತು ಸಂಘಟನೆಯ ಕರ್ನಾಟಕ ಜಾಗ್ರತ ರೈತ ಸಂಘದ ಅಧ್ಯಕ್ಷ ಡಿ.ಎಸ್. ಪೂಜಾರ್ ಮಾತನಾಡಿದರು. ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ರಮೇಶ ಹಿರಬಗೇರಾ, ಪ್ರಮುಖರಾದ ಬಸವಲಿಂಗಪ್ಪ ನಗನೂರು, ಮುದುಕಪ್ಪ ನಾರಬಂಡಿ, ಶೇಖರಪ್ಪ ಕೋಟೆ, ಮೌನೇಶ, ಬಸವರಾಜ ನಾಯಕ ಚಿಂಚರಕಿ, ಆನಂದ ಭೋವಿ ಉಪಸ್ಥಿತರಿದ್ದರು. 
ಜಿಲ್ಲೆ

ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಸಲ್ಲದು

ಕವಿತಾಳ: ಕಾರ್ಮಿಕರಿಗೆ ಸರ್ಕಾರ ಸವಲತ್ತು ನೀಡಲಿ ಎಂದು ಕರ್ನಾಟಕ ಜಾಗ್ರತ ರೈತ ಸಂಘದ ಅಧ್ಯಕ್ಷ ಡಿ.ಎಸ್.ಪೂಜಾರ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಸರ್ಕಾರಗಳು ಕಾರ್ಮಿಕರನ್ನು ನಿರ್ಲಕ್ಷೃ ಮಾಡುತ್ತಿವೆ. ಸವಲತ್ತು ನೀಡುವ ಬಗ್ಗೆ ದಂದ್ವ ನೀತಿ ಅಳವಡಿಸಿಕೊಳ್ಳುತ್ತಿವೆ. ಕಾರ್ಮಿಕರನ್ನು ಜೀತದಾಳುಗಳಂತೆ ನೋಡಲಾಗುತ್ತಿದೆ. ರಾಜ್ಯ-ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಕೈ ಬಿಡಬೇಕು ಎಂದರು.

ಅಧ್ಯಕ್ಷತೆಯನ್ನು ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ರಮೇಶ ಹಿರಬಗೇರಾ ವಹಿಸಿದ್ದರು. ಕಾರ್ಮಿಕ ಸಂಘದ ಪ್ರಮುಖರಾದ ಬಸವಲಿಂಗಪ್ಪ ನಗನೂರು, ಮುದುಕಪ್ಪ ನಾರಬಂಡಿ, ಶೇಖರಪ್ಪ ಕೋಟೆ, ಎಮ್.ಡಿ. ಮೈಬೂಬ, ಮೌನೇಶ, ಬಸವ ರಾಜ ನಾಯಕ ಚಿಂಚರಕಿ ಉಪಸ್ಥಿತರಿದ್ದರು.