ಕವಿತಾಳದಲ್ಲಿ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಶುಕ್ರವಾರ ಮಾತನಾಡಿದರು. 
ಜಿಲ್ಲೆ

ಜನತಾ ಜಲಧಾರೆ ಮೂಲಕ ನೀರಾವರಿ ಜಾಗೃತಿ

ಕವಿತಾಳ: ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಮುಖಾಂತರ ರೈತರ ಆತ್ಮಹತ್ಯೆ ತಪ್ಪಿಸಿದ್ದರು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣಕ್ಕೆ ಜನತಾ ಜಲಧಾರೆ ರಥಯಾತ್ರೆ ಆಗಮನ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಂಪೂರ್ಣ ನೀರಾವರಿ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಜನತಾ ಜಲಧಾರೆ ಕಾರ್ಯಕ್ರಮದ ಮುಖಾಂತರ ನೀರಾವರಿ ಜಾಗೃತಿ ಮೂಡಿಸಲಾಗುತ್ತಿದೆ. ಮಾನ್ವಿ ಕ್ಷೇತ್ರದ ವ್ಯಾಪ್ತಿಯಲ್ಲಿ 9ಎ ಯೋಜನೆ ಜಾರಿಗೊಳಿಸಲಾಗುವುದು. ಯಡಿವಾಳ ಏತ ನೀರಾವರಿ ಯೋಜನೆಯಿಂದ 10 ಸಾವಿರ ಎಕರೆ ಜಮೀನನ್ನು ನೀರಾವರಿ ಮಾಡಲಾಗುವುದು ಇದಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬುದು ರೈತರ ಅಭಿಲಾಷೆಯಾಗಿದೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಲ್ಲಟಗಿ, ಪ್ರಮುಖರಾದ ಬಸವರಾಜಸ್ವಾಮಿ ಹುನುಕುಂಟಿ, ಜಂಬುನಾಥ ಯಾದವ, ರಾಜಾ ರಾಮಚಂದ್ರ ನಾಯಕ, ಲೋಕರಡ್ಡಿ, ವಿಜಯಲಕ್ಷ್ಮೀ ಸಾಹುಕಾರ, ನಾಗರಾಜ ಭೋಗಾವತಿ, ರವಿಕುಮಾರ, ಸಿಲಾರ್ ಸಾಬ್, ಖಾಜಾ ಪಾಷಾ, ರುಕ್ಮುದ್ದೀನ್, ಸಣ್ಣ ಕಿರಿಲಿಂಗ ಇದ್ದರು.