ಹಿರೇಹಣಗಿ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸುತ್ತಿರುವುದು. 
ಜಿಲ್ಲೆ

ವಲಸೆ ಮಕ್ಕಳಿಗೆ ಬಿಸಿಯೂಟ ಆಸರೆ

ಕವಿತಾಳ: ಹಿರೇಹಣಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಶನಿವಾರ ಬಿಸಿಯೂಟ ಸೇವಿಸಿದರು.
ಬರಗಾಲ ಯೋಜನೆಯಡಿಯಲ್ಲಿ ವಲಸೆ ಹೋದವರ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಮುಖ್ಯ ಶಿಕ್ಷಕ ಸೋಮಶೇಖರ ಮಾತನಾಡಿ, ಬೆಂಗಳೂರಿಗೆ ದುಡಿಯಲು ಹೋದವರು ಮಕ್ಕಳನ್ನು ಗ್ರಾಮದಲ್ಲಿ ಬಿಟ್ಟು ಹೋಗಿದ್ದು, ಅಂತಹ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. 2 ಕಿಮೀ ವ್ಯಾಪ್ತಿಯ ಶಾಲೆಗಳನ್ನು ಒಂದುಗೂಡಿಸಿ ಬಿಸಿಯೂಟ ಯೋಜನೆ ಜಾರಿ ಮಾಡಲಾಗಿದೆ. ವಲಸೆ ಮಕ್ಕಳಿಗೆ ಬಿಸಿಯೂಟ ಆಸರೆಯಾಗಿದೆ ಎಂದು ತಿಳಿಸಿದರು.