ಕವಿತಾಳ: ದತ್ತು ಪಡೆದ ಸರ್ಕಾರಿ ಪ್ರೌಢಶಾಲೆಗೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಂಗಳವಾರ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲೆಯನ್ನು ದತ್ತು ಪಡೆದಿರುವೆ. ಶಾಲೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಮಾಹಿತಿ ನೀಡಬೇಕು. ಕುಡಿವ ನೀರು, ಬಿಸಿಯೂಟ ಸೇರಿ ಮೂಲ ಸೌಕರ್ಯದ ಸಮಸ್ಯೆ ಹಾಗೂ ಶಿಕ್ಷಕರ ಕೊರತೆಗಳಿದ್ದರೆ ತಿಳಿಸಬೇಕು.
ಹೆಚ್ಚು ಅಂಕಗಳೊಂದಿಗೆ ಎಸ್ಸೆೆಸ್ಸೆಲ್ಸಿ ತೇರ್ಗಡೆಯಾಗಬೇಕು. ಅತಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ ನೀಡಲಾಗುವುದು. ವಿದ್ಯಾರ್ಥಿ ಜೀವನವು ಬಂಗಾರದ ಜೀವನವಿದ್ದಂತೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮುಖ್ಯಶಿಕ್ಷಕ ಸುಭಾಸ್ ಸಿಂಗ್, ಉಪನ್ಯಾಸಕ ಸಿದ್ಧಾರ್ಥ ಪಾಟೀಲ್ ಇದ್ದರು.