ಕವಿತಾಳದ ವಾಸವಿ ದೇವಸ್ಥಾನದಲ್ಲಿ ಶ್ರೀರಾಮನವಮಿ ಪ್ರಯುಕ್ತ ಶ್ರೀರಾಮಚಂದ್ರ ದೇವರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ವಾಸವಿ ದೇವಿ ಮಹಿಳಾ ಸಂಘದ ಅಧ್ಯಕ್ಷೆ ರಂಜಿತಾ ಬಾಗೋಡಿ, ಜ್ಯೋತಿ ಇಲ್ಲೂರು, ಶ್ರೀದೇವಿ ಇಲ್ಲೂರು, ಸೀತಾ, ಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಕವಿತಾಳದಲ್ಲಿ ಕಲ್ಯಾಣೋತ್ಸವ

ಕವಿತಾಳ: ಪಟ್ಟಣದ ಗಂಗಾನಗರ ಕ್ಯಾಂಪ್ (73)ನಲ್ಲಿ ಭಾನುವಾರ ರಾಮದೇವರ ದೇವಸ್ಥಾನದಲ್ಲಿ ಶ್ರೀರಾಮನವಮಿ ಆಚರಿಸಲಾಯಿತು.

ರಾಮಚಂದ್ರ, ಸೀತಾದೇವಿ, ಲಕ್ಷ್ಮಣ, ಭಕ್ತ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸೀತಾ, ರಾಮ-ಲಕ್ಷ್ಮಣ ಮೂರ್ತಿಗಳಿಗೆ ಸಿಂಗಾರ ಮಾಡಿ ಆಭರಣ, ವಿವಿಧ ಬಗೆಯ ವಸ್ತ್ರ, ಹೂಗಳಿಂದ ಅಲಂಕಾರ ಮಾಡಿ ಮುತ್ತೈದೆಯರಿಂದ ಕಲ್ಯಾಣೋತ್ಸವ ನಡೆಯಿತು. ತದನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ಮಾಡಲಾಯಿತು.

ಅರ್ಚಕ ನರಸಿಂಹರಾವ್ ಮಾತನಾಡಿ, ಆದರ್ಶ ಪುರುಷ ಶ್ರೀರಾಮಚಂದ್ರ ಪ್ರತಿಯೊಬ್ಬರಿಗೂ ಮಾದರಿ. ಸತಿಪತಿ, ಅಣ್ಣ ತಮ್ಮ, ತಂದೆ ತಾಯಿ ಸೇರಿದಂತೆ ಉತ್ತಮ ಸಂಸ್ಕಾರವಂತರಾಗಬೇಕು ಎಂದರೆ ಶ್ರೀರಾಮಚಂದ್ರನ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಬಳಿಕ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ವೆಂಕಟರಡ್ಡಿ ಹಿದಲಾ, ವಿ.ಸುರೇಶ, ಪ್ರಸಾದ ಎನ್.ಎಂ, ರಾಮಚಂದ್ರ, ನರಸಿಂಹರಾವ್, ನಿಂಗಪ್ಪ, ಭವಾನಿ ಈದಲಾ, ಸುನೀತಾ ಗದ್ದೆ, ರಾಣಿ ಗಾರಪಟ್ಟಿ ಇತರರಿದ್ದರು.