ಕವಿತಾಳ: ನಿವಾರ್ ಚಂಡಮಾರುತದಿಂದಾಗಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಶುಕ್ರವಾರ ಆಗಾಗ ಸುರಿದ ತುಂತುರು ಮಳೆ ಭತ್ತದ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು ನಿವಾರ್ ಚಂಡಮಾರುತದಿಂದಾಗಿ ಕಟಾವಿಗೆ ತೊಂದರೆ ಉಂಟಾಗಿದೆ. ಒಂದೆಡೆ ಭತ್ತದ ಬೆಲೆ ಕಡಿಮೆಯಾಗಿ ರೈತರು ಆತಂಕದಲ್ಲಿದ್ದರೆ ಇತ್ತ ಮೋಡ ಕವಿದ ವಾತಾವರಣದಿಂದ ಕೊಯ್ಲು ಮಾಡಿದ ಭತ್ತ ಒಣಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ಇನ್ನೂ ಕೊಯ್ಲಿಗೆ ಬರದಿರುವ ಭತ್ತದ ಬೆಳೆ ಜಮೀನುಗಳಲ್ಲೇ ನೆಲಕ್ಕುರುಳಿತ್ತಿದ್ದು ರೈತರ ಚಿಂತೆಗೀಡು ಮಾಡಿದೆ. ಹಾಲಾಪುರ ಗ್ರಾಮದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಇದ್ದರೂ ರೈತರು ಭತ್ತದ ಬೆಳೆ ಒಣಗಿಸಲು ಅಗತ್ಯವಾದ ಪ್ಲಾಟ್ ಫಾರಂ ಇಲ್ಲದೆ ಎಲ್ಲೆಂದರಲ್ಲಿ ಒಣಗಿಸಬೇಕಾದ ಪರಿಸ್ಥಿತಿ ಎದುರಾಗಿದೆ.