ಕವಿತಾಳ: ಹಿಂದು-ಮುಸ್ಲಿಮರು ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ವೆಂಕಟೇಶ ನಾಯಕ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬದ ನೆಪದಲ್ಲಿ ಮದ್ಯಪಾನ ಮಾಡುವುದು, ಅಕ್ರಮ ಮಾರಾಟ ಮಾಡುವುದು, ಮೆರವಣಿಗೆ ಹಾಗೂ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಯಾರಾದರೂ ಗಲಾಟೆ ಮಾಡಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಠಾಣೆ ವ್ಯಾಪ್ತಿಯ ಕವಿತಾಳ, ಅಮೀನಗಡ, ಗುಗೆಬಾಳ, ಬಾಗಲವಾಡ, ಚಿಕ್ಕದಿನ್ನಿ ಸೇರಿದಂತೆ ಇತರ ಗ್ರಾಮಗಳಲ್ಲಿ ಮೊಹರಂ ಆಚರಣೆ ಕುರಿತು ಮೇಲಧಿಕಾರಿಗಳ ಆದೇಶವನ್ನು ಪಾಲಿಸಬೆಕು ಎಂದರು.