ಜಿಲ್ಲೆ

ಹಣಗಿ ಗ್ರಾಪಂ ಅಧ್ಯಕ್ಷ ಪದಚ್ಯುತಿ; ಅವಿಶ್ವಾಸ ವ್ಯಕ್ತಪಡಿಸಿದ ಸದಸ್ಯರು

ಕವಿತಾಳ: ಸಮೀಪದ ಹಿರೇಹಣಗಿ ಗ್ರಾಪಂ ಅಧ್ಯಕ್ಷ ಆಂಜನೆಯ ಭೋವಿರನ್ನು ಅವಿಶ್ವಾಸ ಮಂಡನೆ ಮೂಲಕ ಶುಕ್ರವಾರ ಪದಚ್ಯುತಿಗೊಳಿಸಲಾಯಿತು.

ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ ಚವ್ಹಾಣ್ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಸಭೆ ನಡೆಯಿತು. 18 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷ ಆಂಜನೆಯರನ್ನು ಮೂವರು ಸದಸ್ಯರು ಬೆಂಬಲಿಸಿದರು. 14 ಅವಿಶ್ವಾಸ ನಿರ್ಣಯ ಪರ ಮತ ಚಲಾಯಿಸಿದರು.

ಈ ಕುರಿತು ಮಾತನಾಡಿದ ಯಲ್ಲಮ್ಮ, ಮೂಕಮ್ಮ, ಶೃತಿ ನವೀನಕುಮಾರ, ದೇವಮ್ಮ, ಸಿದ್ದಯ್ಯಸ್ವಾಮಿ, ಸಂಜೀವರಡ್ಡಿ, ಯಲ್ಮಮ್ಮ ರಮೇಶ, ಅಧ್ಯಕ್ಷ ಆಂಜನೇಯ ಸಭೆ ನಡೆಸದೆ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರು. ಯಾವುದಾದರೂ ಕೆಲಸ ಹೇಳಿದರೆ ಅನುದಾನ ಇಲ್ಲ ಎನ್ನುತ್ತಿದ್ದರು. ಇದರಿಂದಾಗಿ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು ಎಂದರು. ಪಿಡಿಒ ಪ್ರಸಾದ, ನೌಕರ ಸಗರಪ್ಪ ಉಪಸ್ಥಿತರಿದ್ದರು.