ಜಿಲ್ಲೆ

ಸ್ಯಾನಿಟೈಸ್ ಕಾರ್ಯಕ್ಕೆ ಶಾಸಕ ಚಾಲನೆ

ಕವಿತಾಳ: ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಪುಣ್ಯತಿಥಿ ಅಂಗವಾಗಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಹಾಲಾಪುರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ಯಾನಿಟೈಸ್ ಕಾರ್ಯಕ್ಕೆ ಶಾಸಕ ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ಕೊರಾನಾ ಸಂಧರ್ಭ ರಾಜೀವ್‌ಗಾಂಧಿ ಪುಣ್ಯತಿಥಿಯನ್ನು ಅರ್ಥಗರ್ಭಿತವಾಗಿ ಆಚರಿಸುವ ಉದ್ದೇಶದಿಂದ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರಾದ್ಯಂತ ಪ್ರತಿ ಗ್ರಾಮಗಳಲ್ಲೂ ಪ್ರತ್ಯೇಕ ವಾಹನಗಳನ್ನು ಬಳಸಿ ಸ್ಯಾನಿಟೈಸ್ ಮಾಡಲಾಗುವುದು ಎಂದರು.
ಮುಖಂಡರಾದ ಪಂಪನಗೌಡ ಯದ್ದಲದಿನ್ನಿ, ವೆಂಕಟರಡ್ಡಿಗೌಡ, ಯಂಕಣ್ಣ ಯದ್ದಲದಿನ್ನಿ ಇತರರು ಇದ್ದರು.