ಕವಿತಾಳದಲ್ಲಿ ದಲಿತ ಸಂಘದ ಪ್ರಮುಖರು ಡಿಎಸ್‌ಪಿ ಬಿಎಸ್ ತಳವಾರ ಅವರಿಗೆ ಮನವಿ ಸಲ್ಲಿಸಿದರು. ದಲಿತ ಸಂಘದ ವಿಭಾಗೀಯ ಅಧ್ಯಕ್ಷ ಹುಲುಗಪ್ಪ ಸೈದಪೂರ, ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದ ಸಂಸ್ಥಾಪನಾ ಅಧ್ಯಕ್ಷೆ ವಿಜಯರಾಣಿ, ಪ್ರಮುಖರಾದ ಈರಣ್ಣ ಕೇಳಗೇರ, ಮೌನೇಶ ಕೊಡ್ಲಿ, ಚಂದ್ರು, ಅರಳಪ್ಪ ತುಪ್ಪದೂರು, ಅಲ್ಲಮಪ್ರಭು, ಗಂಗಪ್ಪ ತೋರಣದಿನ್ನಿ, ಕುಪ್ಪಣ್ಣ ಹೊಸಮನಿ ಇತರರಿದ್ದರು. 
ಜಿಲ್ಲೆ

ಠಾಣೆಗೆ ದಕ್ಷ ಅಧಿಕಾರಿಯನ್ನು ನೇಮಿಸಿ

ಶಾಮಸುಂದರ್ ಕೊಪ್ಪಳಕರ್

ಕವಿತಾಳ: ಪಟ್ಟಣದ ಪೊಲೀಸ್ ಠಾಣೆ ಪಿಎಸ್‌ಐ ವೆಂಕಟೇಶ ನಾಯಕ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘಟನೆ ಸದಸ್ಯರು ಮೆರವಣಿಗೆ ನಡೆಸಿ ಡಿಎಸ್‌ಪಿ ಬಿಎಸ್ ತಳವಾರಗೆ ಮನವಿ ಸಲ್ಲಿಸಿದರು.

ಪಿಎಸ್‌ಐ ವೆಂಕಟೇಶ ನಾಯಕ ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ದಕ್ಷ ಅಧಿಕಾರಿಯನ್ನು ಠಾಣೆಗೆ ನೇಮಿಸಬೇಕು. ಕವಿತಾಳದಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಹುಲುಗಪ್ಪ ಸೈದಪೂರ, ಅಬ್ರಾಹಂ ಎಂಆರ್‌ಎಚ್‌ಎಸ್, ಚನ್ನಪ್ಪ ಬೂದಿಹಾಳ, ಚಂದಪ್ಪ ಸಿರವಾರ, ಅಲ್ಲಮ ಪ್ರಭು, ಕಾಸಿಮ್ ಮುರಾರಿ, ಬಾಲಸ್ವಾಮಿ ಜಿನ್ನಪೂರ, ಮರಿಸ್ವಾಮಿ ದಡ್ಡೆರಮಡು, ರಾಮಚಂದ್ರಪ್ಪ, ತೋರಣದಿನ್ನಿ, ಮೊಹನ್ ಗೊಸ್ಲಿ, ಚಂದಪ್ಪ ದೊಡ್ಡಮನಿ, ಎಚ್. ಬಸವರಾಜ, ಮೌನೇಶ ಬಳಗನೂರು, ಅರಳಪ್ಪ ತುಪ್ಪದೂರು, ಹುಸೇನಪ್ಪ ಬಾಗಲವಾಡ, ಲಾಳೆಪ್ಪ ಕಲಶೆಟ್ಟಿ, ತುರುಮಂದೆಪ್ಪ, ಸಂತೋಷ ಕಲಾಶೇಟ್ಟಿ, ಲಾಳೆಸ ಕಲಂಗೇರ, ಹುಚ್ಚಪ್ಪ ಬುಳ್ಳಪೂರ ಇತರರಿದ್ದರು.