ಜಿಲ್ಲೆ

ರಸ್ತೆ ಅಪಘಾತದಲ್ಲಿ ತಂದೆ ಸಾವು, ಮಗಳಿಗೆ ಗಾಯ

ಕವಿತಾಳ: ಸಮೀಪದ ಅಮೀನಗಡ-ವಟಗಲ್ ನಡುವೆ ಮಂಗಳವಾರ ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಗಾಯಗೊಂಡಿದ್ದಾಳೆ.

ಯರಮಲದೊಡ್ಡಿ ಗ್ರಾಮದ ಬೀರಪ್ಪ ಕುರುಬರ (45) ಮೃತ. ಮಗಳು ಅಶ್ವಿನಿ ಗಾಯಗೊಂಡಿದ್ದು, ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಶ್ವಿನಿ ಪಾಮನಕಲ್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ತೇರ್ಗಡೆಯಾಗಿ 8ನೇ ಕ್ಲಾಸ್‌ಗೆ ಪ್ರವೇಶಕ್ಕಾಗಿ ಪ್ರಮಾಣ ಪತ್ರ ತರುವ ಸಲುವಾಗಿ ಬೈಕ್‌ನಲ್ಲಿ ಶಾಲೆಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.