ಜಿಲ್ಲೆ

ಕವಿತಾಳದಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಪುಡಿ ವಿತರಣೆ

Raichur

ಕವಿತಾಳ: ಪಟ್ಟಣದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ 9, 10ನೇ ತರಗತಿ ಮತ್ತು ಪಿಯು ತರಗತಿಗಳನ್ನು ಸೋಮವಾರ ಶುರುಮಾಡಲಾಯಿತು.

ಕೊವೀಡ್ ಪದ್ಧತಿಯಂತೆ 20 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಪ್ರಥಮ ತರಗತಿ ಮುಗಿದ ನಂತರ ನಂತರ ಮತ್ತೆ 20 ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಯಿತು. ಬಾಲಕರ ಪ್ರೌಢಶಾಲೆಯಲ್ಲಿ 10ನೇ ತರಗತಿಗೆ 41 ವಿದ್ಯಾರ್ಥಿಗಳು ಹಾಜರಿದ್ದರು. 9ನೇ ತರಗತಿಗೆ 45 ವಿದ್ಯಾರ್ಥಿಗಳು ಹಾಜರಿದ್ದರು. ತರಗತಿ ನಂತರ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಹಾಲಿನ ಪುಡಿ ವಿತರಿಸಲಾಯಿತು.